ಹಲ್ಲು ನೋವಿಗೆ ಹಲವು ವಿಧದ ಮನೆಮದ್ದುಗಳಿವೆ. ಚಾಕೊಲೇಟ್ ಅಥವಾ ಐಸ್ ಕ್ರೀಮ್ ತಿಂದು ಹಲ್ಲು ಹುಳುಕಾಗಿ ನೋವು ಕಾಣಿಸಿಕೊಂಡಿದ್ದರೆ ಹೀಗೆ ಮಾಡಿ.
ಮೊದಲು ಬಾಯಿಯನ್ನು ಸ್ವಚ್ಛಗೊಳಿಸಿ. ಬ್ರಶ್ ಮಾಡಿದ ಬಳಿಕ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ಹಲ್ಲಿನಡಿಯಲ್ಲಿ ಸಿಲುಕಿರುವ ಕೊಳೆ ದೂರವಾಗಿ ಬಾಯಿ ಸ್ವಚ್ಛಗೊಳ್ಳುತ್ತದೆ.
ಇಂಗನ್ನು ಸಣ್ಣ ಉಂಡೆಯಾಗಿ ಮಾಡಿ ನೋವಿರುವ ಜಾಗದಲ್ಲಿ ಇಟ್ಟರೆ ಅದು ನೋವು ಹೀರಿಕೊಂಡು ನಿಮಗೆ ರಿಲೀಫ್ ನೀಡುತ್ತದೆ. ಲವಂಗವನ್ನೂ ಇದೇ ರೀತಿಯಲ್ಲಿ ಬಳಸಬಹುದು. ಬೇಕಿದ್ದರೆ ಲವಂಗವನ್ನು ಒಮ್ಮೆ ಜಜ್ಜಿ ನೋವಿರುವೆಡೆ ಇಡಿ. ಸ್ವಲ್ಪ ಹೊತ್ತಿನಲ್ಲೇ ನೋವು ಕಡಿಮೆಯಾಗುತ್ತದೆ.
ಸೀಬೆ ಮರದ ಚಿಗುರನ್ನು ಕೊಯ್ದು ಕಷಾಯ ಮಾಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ಕ್ರಿಮಿ ಕೀಟಗಳು ಸತ್ತು, ದುರ್ವಾಸನೆ ಬೀರುವುದು ಕಡಿಮೆಯಾಗುತ್ತದೆ..