ಕೊರೊನಾ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮಹತ್ವ ಪಡೆದಿದೆ. ಕೊರೊನಾ ವೈರಸ್ ಕೊಲ್ಲಲು ಇದು ಒಳ್ಳೆ ಮದ್ದು ಎನ್ನಲಾಗಿದೆ. ಜನರು ಕೊರೊನಾ ಭಯಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಸ್ತಿದ್ದಾರೆ. ಆದ್ರೆ ಅನೇಕರಿಗೆ ಬಳಸುವ ವಿಧಾನ ತಿಳಿದಿಲ್ಲ.
ವೈದ್ಯರ ಪ್ರಕಾರ ಹ್ಯಾಂಡ್ ಸ್ಯಾನಿಟೈಜರ್ ಬಳಸುವ ಮೊದಲು ಡಬ್ಲ್ಯುಹೆಚ್ ಒನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಬೇಕು. ಸೋಪ್ ಅಥವಾ ಶುದ್ಧ ನೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು. ಸ್ಯಾನಿಟೈಜರ್ ಬಳಸಿದವರು ಆಹಾರ ಸೇವನೆ ಮಾಡುವಾಗ ಕೈಗಳನ್ನು ಶುದ್ಧ ನೀರಿನಲ್ಲಿ ತೊಳೆದುಕೊಳ್ಳಬೇಕು.
ಹ್ಯಾಂಡ್ ಸೈನಿಟೈಜರ್ ಕೈಗೆ ಹಾಕಿ 2 ಸೆಕೆಂಡ್ ಮಾತ್ರ ಕೈಗಳನ್ನು ಉಜ್ಜಿಕೊಳ್ತಾರೆ. ಆದ್ರೆ ಅದು ತಪ್ಪು. ಕೈನ ಪ್ರತಿ ಭಾಗ ತಲುಪಬೇಕೆಂದ್ರೆ 6 ಸೆಕೆಂಡ್ ಕೈಗಳನ್ನು ಉಜ್ಜಬೇಕು. ಎರಡೂ ಕೈಗಳನ್ನು ಪರಸ್ಪರ ಉಜ್ಜಬೇಕು. ಪ್ರತಿ ಬಾರಿ 5 ಎಂ.ಎಲ್ ಸ್ಯಾನಿಟೈಜರ್ ಹಾಕಿ ಕೈಗಳನ್ನು ಉಜ್ಜಬೇಕು. ಕೈಗಳು ಸ್ವಚ್ಛವಾಗಿರಬೇಕು. ಮಣ್ಣು, ಬಣ್ಣವಿದ್ದಾಗ ಸ್ಯಾನಿಟೈಜರ್ ಬಳಸಿದ್ರೆ ಪ್ರಯೋಜನವಿಲ್ಲ.
ಸ್ಯಾನಿಟೈಜರ್ ಖರೀದಿ ವೇಳೆ ಅದ್ರಲ್ಲಿ ಶೇಕಡಾ 60-70ರಷ್ಟು ಈಥೈಲ್ ಅಥವಾ ಐಸೊಪ್ರೊಪಿಲ್ ಆಲ್ಕೋಹಾಲ್ ಇದೆಯಾ ಎಂಬುದನ್ನು ನೋಡಿ ಖರೀದಿ ಮಾಡಬೇಕು. ಸ್ಯಾನಿಟೈಜರ್ ಹಚ್ಚಿದ ನಂತ್ರ ಆಹಾರ ಸೇವನೆ ಮಾಡಬಾರದು. ಕೈ ತೊಳೆಯಲು ನೀರಿಲ್ಲ ಎನ್ನುವವರು 20 ಸೆಕೆಂಡ್ ಬಿಟ್ಟು ಆಹಾರ ಸೇವನೆ ಮಾಡಬೇಕು.
ಒಮ್ಮೆ ಕೈಗೆ ಹಚ್ಚಿದ ಸ್ಯಾನಿಟೈಜರ್ 20 ಸೆಕೆಂಡುಗಳ ಕಾಲ ಪರಿಣಾಮ ಬೀರುತ್ತದೆ. ಪದೇ ಪದೇ ಸ್ಯಾನಿಟೈಜರ್ ಬಳಸಿದ್ರೆ ಪರಿಣಾಮ ಬೀರುವುದಿಲ್ಲ. ಒಮ್ಮೆ ಹಚ್ಚಿದ ನಂತ್ರ ಕೈ ತೊಳೆದು ಮತ್ತೆ ಸ್ಯಾನಿಟೈಜರ್ ಬಳಸಿದ್ರೆ ಪರಿಣಾಮಕಾರಿ. ಬಾಯಿಗೆ ಸ್ಯಾನಿಟೈಜರ್ ಹೋಗದಂತೆ ನೋಡಿಕೊಳ್ಳಿ.