ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ, ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ನೀವು ಈಗಿನಿಂದಲೇ ಡಯಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು.
ಇಂದಿನಿಂದಲೇ ಎಚ್ಚರಿಕೆ ತೆಗೆದುಕೊಳ್ಳುವ ಮೊದಲ ಹಂತವೆಂದರೆ ಮಿತವಾಗಿ ಆಹಾರ ಸೇವಿಸಿ. ಎಣ್ಣೆಯಲ್ಲಿ ಕರಿದ ಅಥವಾ ಹುರಿದ ಆಹಾರ ಸೇವಿಸುವುದನ್ನು ತ್ಯಜಿಸಿ.
ಬೆವರಿದಾಗ ‘ಮೇಕಪ್’ ಹಾಳಾಗದಿರಲು ಏನು ಮಾಡಬೇಕು…..?
ದೇಹದಲ್ಲಿ ಕೊಬ್ಬು ಸಂಗ್ರಹಣೆ ಆಗದಂತೆ ನೋಡಿಕೊಳ್ಳಿ. ಹೊಟ್ಟೆ ಉಬ್ಬುತ್ತಿದೆ ಎನ್ನಿಸಿದರೆ ಸೊಂಟದ ಸುತ್ತ ಕೊಬ್ಬು ನಿಲ್ಲುತ್ತದೆ ಎನ್ನಿಸಿದರೆ ತಕ್ಷಣವೇ ವ್ಯಾಯಾಮ ಮಾಡಿ ಕರಗಿಸಿಕೊಳ್ಳಿ.
ನಿಮ್ಮ ಕುಟುಂಬದವರು ಹೆಚ್ಚು ದಪ್ಪಗಿದ್ದರೆ ನೀವು ಜಂಕ್ ಫುಡ್ ಗೆ ಗುಡ್ ಬೈ ಹೇಳಲೇಬೇಕು. ಇಲ್ಲವೇ ವಾರಕ್ಕೊಂದು ದಿನವನ್ನು ಮಾತ್ರ ಹೊರಗಿನ ಆಹಾರ ಸೇವನೆಗಾಗಿ ಮೀಸಲಿಡಿ. ಹೀಗೆ ಮಾಡಿದರೆ ಮಾತ್ರ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.