ಸಂಧಿವಾತ ಸಮಸ್ಯೆ ಹಲವರಲ್ಲಿ ಕಂಡುಬರುತ್ತದೆ. ಮೂಳೆಗಳ ದುರ್ಬಲತೆಯಿಂದ ಈ ಸಮಸ್ಯೆ ಕಾಡುತ್ತದೆ. ಆಹಾರದಲ್ಲಿವ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ ಎನ್ನಲಾಗಿದೆ. ಆದಕಾರಣ ಸಂಧಿವಾತ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬೇಡಿ.
ಕೊಬ್ಬಿನ ಆಹಾರ ಉರಿಯೂತದ ಸಮಸ್ಯೆಗೆ ಕಾರಣವಾಗುವುದರಿಂದ ಸಂಧಿವಾತ ಸಮಸ್ಯೆ ಇರುವವರು ಇದನ್ನು ತ್ಯಜಿಸಬೇಕು. ಎಣ್ಣೆಯುಕ್ತ ಆಹಾರ, ಬೆಣ್ಣೆ, ಮಾಂಸ, ಚೀಸ್ ಮುಂತಾದವುಗಳಿಂದ ದೂರವಿರಬೇಕು.
ಸಕ್ಕರೆ ಅಂಶ ಬೊಜ್ಜು, ಉರಿಯೂತದ ಸಮಸ್ಯೆಗಳನ್ನು ಉಂಟುಮಾಡುವುದರಿಂದ ಚಹಾ, ಕಾಫಿ, ಸ್ವೀಟ್ಸ್, ತಂಪು ಪಾನೀಯಗಳನ್ನು ಸೇವಿಸಬಾರದು. ಹಾಗೇ ಕೆಂಪು ಮಾಂಸ, ಬಿಯರ್, ಸೀಫುಡ್ ಗಳನ್ನು ಸೇವಿಸದೇ ಇರುವುದು ಒಳ್ಳೆಯದು.