ಮನೆಯ ಮುಂದೆ ಪೂಜನೀಯವಾಗಿ ಬೆಳೆಯುವ ತುಳಸಿಗೆ ಆಯುರ್ವೇದ ಔಷಧ ಪದ್ಧತಿಯಲ್ಲಿ ಮಹತ್ತರವಾದ ಸ್ಥಾನವಿದೆ. ತುಳಸಿ ಕಟ್ಟೆಯಲ್ಲಿ ಮಾತ್ರವಲ್ಲ ಮನೆಮುಂದಿನ ಹೂದೋಟದಲ್ಲಿ ಇಲ್ಲವೇ ಹೂದಾನಿಗಳಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆನ್ನುತ್ತೀರಾ?
ತುಳಸಿಯ ಗಾಳಿ ಸೇವನೆ ದೇಹಕ್ಕೆ ಅತ್ಯುತ್ತಮವಾದುದು. ಬೆಳಿಗ್ಗೆ ಇಲ್ಲವೇ ಸಂಜೆ ನಿಮ್ಮ ಹೂದೋಟದಲ್ಲಿ ಓಡಾಡುವಾಗ ತುಳಸಿ ಗಿಡದ ಗಾಳಿ ನಿಮ್ಮ ಮೂಗಿನ ಮೂಲಕ ಒಳಹೋದರೆ ಅದರಿಂದ ಉಸಿರಾಟದ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಪರಿಹಾರವಾಗುತ್ತವೆ.
ಪ್ರತಿ ದಿನ ಬೆಳಗ್ಗೆ ನೀರಿಗೆ ತುಳಸಿ ಎಲೆ ಸೇರಿಸಿ ಕುದಿಸಿ ಕುಡಿಯುವುದರಿಂದ ಹೊಟ್ಟೆಯ ಕಲ್ಮಶಗಳೆಲ್ಲ ದೂರವಾಗುತ್ತವೆ. ಮಕ್ಕಳಿಗೆ ಜ್ಞಾಪಕಶಕ್ತಿಯನ್ನು ಹೆಚ್ಚಿಸುವ ಇದನ್ನು ಶೀತ ಕೆಮ್ಮುಗಳ ಪರಿಹಾರಕ್ಕೆ ಮನೆ ಮದ್ದಾಗಿಯೂ ಬಳಸಬಹುದು. ತಲೆ ನೋವು, ಕಣ್ಣಿನ ಸಮಸ್ಯೆಗೂ ಇದು ಪರಿಹಾರವಾಗಿದೆ.
ಸೌಂದರ್ಯ ಚಿಕಿತ್ಸೆಗಾಗಿಯೂ ತುಳಸಿ ಬಳಕೆಯಾಗುತ್ತಿದ್ದು ಮುಖದ ಸುಕ್ಕು, ಕಲೆಗಳನ್ನು ಇದು ಕಡಿಮೆ ಮಾಡುತ್ತದೆ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.