ವೈದ್ಯರನ್ನು ಸಂಪರ್ಕಿಸದೆ ವಿಟಮಿನ್ ಮಾತ್ರೆಗಳನ್ನು ಖರೀದಿಸಿ ಜನರು ಸೇವನೆ ಮಾಡ್ತಿದ್ದಾರೆ. ಕೆಲವರಂತೂ ಅಡುಗೆ ಮನೆಯಲ್ಲಿ ಇರುವ ಮಸಾಲೆ ಪದಾರ್ಥಗಳನ್ನ ಬೇಕಾಬಿಟ್ಟಿಯಾಗಿ ಬಳಸಿಕೊಂಡು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ಈಗ ಇದೇ ಇವರ ಜೀವಕ್ಕೆ ಕಂಟಕವಾಗಿದೆ.
ಅತಿಯಾದರೆ ಅಮೃತ ಕೂಡಾ ವಿಷ ಅಂತೆ. ಅದೇ ರೀತಿ ಮಸಾಲೆ ಪದಾರ್ಥಗಳಾಗಿರುವ ಅರಿಶಿನ, ಶುಂಠಿ, ಜೀರಿಗೆ, ಮೆಣಸಿನ ಕಾಳು, ಬೆಳ್ಳುಳ್ಳಿ, ಮೆಂತ್ಯ ಇವೆಲ್ಲವೂ ತಿಂದರೆ ದೇಹಕ್ಕೆ ಒಳ್ಳೆಯದು. ಆದರೆ ಇದು ಅತಿಯಾದರೆ ಮಾತ್ರ ದೇಹಕ್ಕೆ ತುಂಬಾ ನಷ್ಟ.
ಇವೆಲ್ಲ ದೇಹದ ತಾಪಮಾನವನ್ನ ಹೆಚ್ಚು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಂಗಿನಲ್ಲಿ ಎಲ್ಲವನ್ನೂ ಸೇವಿಸಬಾರದು. ಹಾಗೆ ಆಲೋಚನೆ ಮಾಡಿ ಸೇವನೆ ಮಾಡಬೇಕು. ಇಲ್ಲವಾದ್ರೆ ದೇಹದ ಮೇಲೆ ಅಡ್ಡ ಪರಿಣಾಮವುಂಟಾಗುವುದ್ರಲ್ಲಿ ಸಂಶಯವಿಲ್ಲ.