ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು.
ಈ ಆಹಾರ ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣ ಅಧಿಕ ಮಾಡಬಹುದು. ರಕ್ತಹೀನತೆ ಸಮಸ್ಯೆ ಇರುವವರು ಈ ಆಹಾರಗಳನ್ನು ತಮ್ಮ ಡಯಟ್‌ನಲ್ಲಿ ಸೇರಿಸಿದರೆ ಸಮಸ್ಯೆಯಿಂದ ದೂರವಿರಬಹುದು.
ಸೊಪ್ಪು
ಎಲ್ಲಾ ಬಗೆಯ ಸೊಪ್ಪು ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸುವಲ್ಲಿ ಸಹಕಾರಿ.
ಮಾಂಸ ಮತ್ತು ಮೊಟ್ಟೆ
ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಮಕ್ಕಳ ದೇಹದ ಬೆಳವಣಿಗೆಗೆ ಸಹಕಾರಿ. ಚಿಕನ್, ಮಟನ್, ಮೊಟ್ಟೆ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡುತ್ತದೆ.
ನಟ್ಸ್
ಖನಿಜಾಂಶ, ವಿಟಮಿನ್ಸ್ ನಟ್ಸ್‌ನಲ್ಲಿ ಅಧಿಕವಿದ್ದು ಇವುಗಳನ್ನು ತಿನ್ನುವುದರಿಂದ ಸುಸ್ತು ಕಡಿಮೆಯಾಗುತ್ತದೆ.