ಕೊರೋನಾ ಭೀತಿಯಿಂದ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹಾಗೆಂದು ವಾಕಿಂಗ್, ರನ್ನಿಂಗ್ ಮಾಡುವಾಗ ಮಾಸ್ಕ್ ಬಳಸುವ ಮುನ್ನ ಎಚ್ಚರವಿರಲಿ. ಇದು ಉಸಿರು ಕಟ್ಟಿಸೀತು…
ಮಾಸ್ಕ್ ಧರಿಸಿ ಓಡಿದರೆ ಶ್ವಾಸಕೋಶಕ್ಕೆ ತೊಂದರೆಯಾದೀತು. ಹೀಗಾಗಿ ಉದ್ಯಾನವನಗಳಲ್ಲಿ ಓಡುವ ಬದಲು ಮನೆಯಲ್ಲೇ ವ್ಯಾಯಾಮ ಮಾಡಿ ಎಂದು ಇತ್ತೀಚೆಗೆ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಹೊರಾಂಗಣದಲ್ಲೇ ವ್ಯಾಯಾಮ ಮಾಡಲು ಇಚ್ಛಿಸುವವರು ಮಾಸ್ಕ್ ಧರಿಸಿದಾಗ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡಾವು. ಮೂರು ಲೇಯರ್ನ ಮಾಸ್ಕ್ ಬಳಕೆಯಿಂದ ವೈರಸ್ ಹರಡುವುದು ನಿಂತೀತು. ಅದರೆ ಈ ಮಾಸ್ಕ್ಗಳನ್ನು ಓಡುವಾಗ ಧರಿಸದೇ ಇರುವುದೇ ಒಳಿತು. ಇದರಿಂದ ವ್ಯಕ್ತಿಗೆ ಉಸಿರಾಟ ಸಮಸ್ಯೆ, ಎದೆನೋವು ಅಥವಾ ತಲೆತಿರುಗಿದ ಅನುಭವವಾದೀತು. ಶ್ವಾಸಕೋಶ ಸಂಬಂಧಿ ಅಥವಾ ಹೃದಯ ಸಂಬಂಧಿ ಸಮಸ್ಯೆ ಇರುವವರು ಮಾಸ್ಕ್ ಧರಿಸಿ ವ್ಯಾಯಾಮ ಮಾಡಬಾರದಂತೆ.