ಪ್ರಸ್ತುತ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಮೈಗ್ರೇನ್ ಕೂಡಾ ಒಂದು. ಕಂಪ್ಯೂಟರ್, ಮೊಬೈಲ್ ವಿಪರೀತ ಬಳಕೆಯೂ ಇದಕ್ಕೊಂದು ಕಾರಣವಾಗಿರಬಹುದು ಎಂಬುದನ್ನು ಸಂಶೋಧನೆ ಇತ್ತೀಚೆಗೆ ದೃಢಪಡಿಸಿದೆ.
ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ ಅಸಿಡಿಟಿ, ನಿದ್ರಾ ಹೀನತೆ ಸಮಸ್ಯೆಗಳು ಕಾಡಿದಾಗ ಮೈಗ್ರೇನ್ ಸಮಸ್ಯೆ ಬಹುವಾಗಿ ಕಾಡುತ್ತದೆ. ಹಾಗಾಗಿ ಮಹಿಳೆಯರು ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಹೊತ್ತಿಗೆ ಸರಿಯಾಗಿ ತಿನ್ನುವ, ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ಕಡ್ಡಾಯವಾಗಿ ಪಾಲಿಸಬೇಕು.
ನಮ್ಮ ಆರೋಗ್ಯದ ನಿಯಂತ್ರಣ ಮಾಡಬೇಕಾದವರು ನಾವೇ ಎಂಬುದನ್ನು ನೆನಪಿಟ್ಟುಕೊಂಡು ಹೆಚ್ಚು ಚಿಂತೆ ಮಾಡದೆ ದುಃಖ, ಶೋಕಕ್ಕೆ ಒಳಗಾಗದೆ ಕೂಲ್ ಆಗಿ ಎಲ್ಲವನ್ನೂ ಸ್ವೀಕರಿಸುವುದನ್ನು ಕಲಿಯಬೇಕು.
ಋತುಸ್ರಾವದ ಸಮಯದಲ್ಲಿ ತಲೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆ ಬಳಿಕವೂ ನೋವು ಮುಂದುವರಿದರೆ ಕಡ್ಡಾಯವಾಗಿ ವೈದ್ಯರನ್ನು ಕಾಣಬೇಕು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ನೀರು ಕುಡಿಯುವುದನ್ನೇ ಮರೆತು ಬಿಟ್ಟಿರುತ್ತಾರೆ. ಮೈಗ್ರೇನ್ ಗೆ ಮುಖ್ಯವಾದ ಕಾರಣ ಎಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಹಾಗಾಗಿ ನಿತ್ಯ ಮರೆಯದೆ ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಿರಿ.