ಇದು ಕೊರೋನಾ ಕಾಲ. ಮಳೆಗಾಲ ಬಂದಾಗ ಸಹಜವಾಗಿ ಕಾಡುವ ಶೀತ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೊರೋನಾ ಭೀತಿ ಕಾಡುತ್ತದೆ. ಅಲ್ಲಿ ಹೋಗಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ ಏನಪ್ಪಾ ಗತಿ ಎಂಬ ಭಯವೇ ವೈದ್ಯರಿಂದ ದೂರ ಉಳಿಯುವಂತೆ ಮಾಡುತ್ತದೆ.
ಮನೆಯಲ್ಲೇ ಇದ್ದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆಂದು ನೋಡೋಣ.
ಊಟಕ್ಕೆ ಮುನ್ನ ಮನೆಯಲ್ಲಿ ಸೂಪ್ ಕುಡಿಯುವುದು ಉತ್ತಮ. ಶುಂಠಿ, ಬೆಳ್ಳುಳ್ಳಿ ಹಾಗೂ ಕಾಳು ಮೆಣಸು ಬೆರೆಸಿದ ಸೂಪ್ ನಿತ್ಯ ಕುಡಿದರೆ ದೇಹ ಬೆಚ್ಚಗಿರುತ್ತದೆ. ಇದರಿಂದ ಸಾಮಾನ್ಯ ಸಮಸ್ಯೆಗಳಾದ ಶೀತ ಅಥವಾ ಕೆಮ್ಮು ಕಾಡುವುದಿಲ್ಲ.
ನಿತ್ಯ ಸಂಜೆ ವೇಳೆ ಗ್ರೀನ್ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಹಲವು ಬಗೆಯ ಖನಿಜ, ವಿಟಮಿನ್ ಗಳು ದೇಹಕ್ಕೆ ಸಿಗುವುದಲ್ಲದೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಜೇನುತುಪ್ಪ ಮನುಷ್ಯನ ದೇಹದಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸುವುದರಿಂದ ನಿತ್ಯ ಒಂದಿಲ್ಲೊಂದು ರೂಪದಲ್ಲಿ ಜೇನು ಸವಿಯುವುದು ಒಳ್ಳೆಯದು. ಆಯುರ್ವೇದ ಪದ್ಧತಿಯಲ್ಲೂ ಜೇನಿಗೆ ಮಹತ್ವದ ಸ್ಥಾನವಿದ್ದು ಕಫ, ಅಸ್ತಮಾ ಕೆಮ್ಮು ನಿವಾರಣೆಗೆ ಜೇನುತುಪ್ಪ ಅತ್ಯುತ್ತಮ ಔಷಧಿ.