ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಜ್ವರಗಳಲ್ಲಿ ಮಲೇರಿಯಾವು ಒಂದು. ತಲೆನೋವು, ಜ್ವರ, ಆಯಾಸ, ಸ್ನಾಯು ನೋವು, ಬೆನ್ನು ನೋವು ಇದರ ಸಾಮಾನ್ಯ ಲಕ್ಷಣ. ಇದರ ಚಿಕಿತ್ಸೆ ವೇಳೆ ಕೆಲವು ಆಹಾರಗಳನ್ನು ಸೇವಿಸುವುದರಿಂದ ನೀವು ಇದರ ಲಕ್ಷಣಗಳನ್ನು ಬಹುಬೇಗ ಕಡಿಮೆ ಮಾಡಿಕೊಳ್ಳಬಹುದು.
ದಾಲ್, ಕೋಳಿ ಮತ್ತು ಮೊಟ್ಟೆಯಂಥ ಆಹಾರಗಳನ್ನು ಹೆಚ್ಚು ಸೇವಿಸಿ. ಹೆಚ್ಚು ಪ್ರೊಟೀನ್ ಯುಕ್ತ ಆಹಾರಗಳನ್ನು ಸೇವಿಸಿ. ದಾಲ್ ಸೂಪ್ ತಯಾರಿಸಿ. ಕೇಕ್ ತಿನ್ನಿ. ಹಾಲು, ಲಸ್ಸಿ ಮತ್ತು ಮೊಸರು ಸೇವಿಸಿ. ಇವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಗೊಳಿಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಹಣ್ಣಿನ ರಸ ಸೇವಿಸಿ. ಇದರಲ್ಲಿರುವ ಜೀವಸತ್ವಗಳು ರೋಗ ನಿರೋಧಕ ಶಕ್ತಿಯನ್ನು ಮಾತ್ರವಲ್ಲ ಸೋಂಕಿನ ವಿರುದ್ಧ ಹೋರಾಡಲೂ ನೆರವಾಗುತ್ತದೆ. ಸಿಟ್ರಸ್ ಹಣ್ಣು, ವಿಟಮಿನ್ ಸಿ ಸೋಂಕಿನ ವಿರುದ್ಧ ಹೋರಾಡುತ್ತದೆ. ಪೇರಳೆ ಹಣ್ಣು ಆರ್.ಬಿ.ಸಿ. ಹೆಚ್ಚಿಸಲು ನೆರವಾಗುತ್ತದೆ.
ಒಣ ಹಣ್ಣುಗಳನ್ನೂ ಸೇವಿಸಿ. ನೆನೆಸಿಟ್ಟ ಬಾದಾಮಿ, ಪುಡಿಮಾಡಿ ಹಾಲಿನಲ್ಲಿ ಬೆರೆಸಿದ ಬಾದಾಮಿ ಸೇವಿಸಿ. ಇವು ಸೋಂಕಿನ ವಿರುದ್ಧ ಹೋರಾಡಲು ನೆರವಾಗುತ್ತವೆ. ಜಂಕ್ ಫುಡ್ ನಿಂದ ದೂರವಿರಿ. ಮಸಾಲೆಯುಕ್ತ ಆಹಾರ ಸೇವಿಸದಿರಿ. ದೇಹ ನಿರ್ಜಲೀಕರಣಗೊಳ್ಳಲು ಬಿಡದಿರಿ. ಹೆಚ್ಚು ನೀರು ಕುಡಿಯಿರಿ.
ಹೆಚ್ಚಿನ ಫೈಬರ್ ಆಹಾರಗಳ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಬರಬಹುದು. ಹಾಗಾಗಿ ಗಂಜಿ, ಬ್ರೆಡ್ ಮೊದಲಾದ ಲಘು ಆಹಾರಗಳನ್ನೇ ಸೇವಿಸಿ.