alex Certify ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ

ಹೊಸ ವರ್ಷದಲ್ಲಿ ತೂಕ ಇಳಿಸುವ ನಿಮ್ಮ ನಿರ್ಧಾರ ಹತ್ತು ದಿನಗಳೊಳಗೇ ನಿಮ್ಮಿಂದ ದೂರವಾಗಿದೆಯೇ? ಅದನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸಕಾಲ.

ಲಾಕ್ ಡೌನ್ ಬಳಿಕ ಹೆಚ್ಚಿನ ಮಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ದೊರೆತಿದ್ದು ಇದರಿಂದ ದೇಹ ತೂಕ ವಿಪರೀತ ಹೆಚ್ಚಿ ಹಲವು ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡಿದೆ. ಈ ಸಮಸ್ಯೆಯಿಂದ ಸುಲಭದಿಂದಲೇ ಹೊರಬರಬಹುದು. ಹೇಗೆನ್ನುತ್ತೀರಾ?

ಸಾಕಷ್ಟು ನಿದ್ದೆ ಮಾಡದಿರುವುದು ನಿಮ್ಮ ತೂಕ ಹೆಚ್ಚಲು ಪ್ರಮುಖ ಕಾರಣವಾಗಬಹುದು. ಮನೆಯಲ್ಲೇ ಇದ್ದೀರಿ ಎಂಬ ಕಾರಣಕ್ಕೆ ತಡರಾತ್ರಿಯ ತನಕ ಕೆಲಸ ಮಾಡುವುದು ಅಥವಾ ಮೊಬೈಲ್ ನೋಡುತ್ತಾ ಕೂರುವುದರಿಂದ ದೇಹ ತೂಕ ವಿಪರೀತ ಹೆಚ್ಚುತ್ತದೆ. ಹಾಗಾಗಿ ನಿದ್ದೆಯನ್ನು ನಿರ್ಲಕ್ಷ ಮಾಡದಿರಿ.

ʼತೂಕʼ ಇಳಿಸಿಕೊಳ್ಳಲು ಬಯಸುವವರ ದಿನಚರಿ ಹೀಗಿರಲಿ

ಇನ್ನು ಕೆಲವರು ಬಹುಬೇಗ ತೂಕ ಕಡಿಮೆಯಾಗಬೇಕು ಎಂಬ ಕಾರಣಕ್ಕೆ ಬೆಳಗಿನ ಉಪಾಹಾರವನ್ನೇ ಸ್ಕಿಪ್ ಮಾಡುತ್ತಾರೆ. ಇದರಿಂದ ನಿಮ್ಮ ಮನಸ್ಸು ಕುರುಕುರು ತಿಂಡಿಗಳತ್ತ ಹೆಚ್ಚು ಆಕರ್ಷಿತರಾಗುತ್ತೀರಿ ಮಾತ್ರವಲ್ಲ ಅದನ್ನು ವಿಪರೀತ ಸೇವಿಸಿ ದೇಹ ತೂಕ ಅನಾವಶ್ಯಕವಾಗಿ ಹೆಚ್ಚಿಸಿಕೊಳ್ಳುತ್ತೀರಿ.

ಕೆಲಸ ಮಾಡುವಾಗ ತಿಂಡಿಯ ಪೊಟ್ಟಣವನ್ನು ಪಕ್ಕದಲ್ಲಿ ಇಟ್ಟುಕೊಳ್ಳದಿರಿ. ಇದರಿಂದ ನಿಮಗರಿವಿಲ್ಲದೆಯೇ ಹೆಚ್ಚಿನ ಪ್ರಮಾಣದ ತಿಂಡಿ ನಿಮ್ಮ ಹೊಟ್ಟೆಯನ್ನು ಸೇರಿರುತ್ತದೆ. ಟಿವಿ ನೋಡುವಾಗಲೂ ಈ ತಪ್ಪು ಮಾಡದಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...