ಕೊರೊನಾ ಮಹಾಮಾರಿ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಕೊರೊನಾದಿಂದ ಸಾವಿಗೀಡಾದವರ ಪೈಕಿ ಸಾಕಷ್ಟು ಜನ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರು ಎನ್ನಲಾಗಿದೆ. ಈ ಮಧ್ಯ ಮತ್ತೊಂದು ಸಮಸ್ಯೆ ಉಂಟಾಗಿದೆ. ಸಕ್ಕರೆ ಕಾಯಿಲೆ ಇರುವವರಿಗೆ ಸೋಂಕು ಹೆಚ್ಚಾಗಿ ತಗುಲುತ್ತದೆಯಾ ಎಂಬ ಚಿಂತೆ ಹಲವರದ್ದು.
ಆದರೆ ವೈದ್ಯರು ಹೇಳುವ ಪ್ರಕಾರ, ಮಧುಮೇಹ ಇರುವವರಿಗೆ ಹೆಚ್ಚು ಕೊರೋನಾ ಸೋಂಕು ತಗುಲುತ್ತದೆ ಎಂಬುದಕ್ಕೆ ನಿರ್ಧಿಷ್ಟವಾದ ಯಾವುದೇ ವರದಿಗಳಿಲ್ಲ. ಆದರೂ ತಮ್ಮ ಎಚ್ಚರಿಕೆಯಲ್ಲಿ ತಾವಿದ್ದರೆ ಒಳ್ಳೆಯದು ಅನ್ನೋದು ವೈದ್ಯರ ಅಭಿಪ್ರಾಯ. ಸಕ್ಕರೆ ಕಾಯಿಲೆ ಇರುವವರು ಕೊರೊನಾ ತಗುಲಿದಾಗ ವೈದ್ಯರ ಸಲಹೆಯ ಮೇರೆಗೆ ಮಧುಮೇಹ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಮಧುಮೇಹ ಕಾಯಿಲೆ ಇದ್ದವರಿಗೆ ಸೋಂಕು ತಗುಲಿದ್ದೇ ಆದಲ್ಲಿ ಅಂತವರು ಸರಿಯಾದ ಸಮಯಕ್ಕೆ ಪೌಷ್ಟಿಕಾಂಶ ಆಹಾರ ತೆಗೆದುಕೊಳ್ಳಬೇಕು. ವ್ಯಾಯಾಮ, ವಾಕಿಂಗ್ ಮಾಡಬೇಕು. ನಿರಂತರವಾಗಿ ವೈದ್ಯರ ಸಂಪರ್ಕದಲ್ಲಿರಬೇಕು. ಹಾಗೆಯೇ ಬಿಪಿಯನ್ನು ಚೆಕ್ ಮಾಡುತ್ತಾ ಇರಬೇಕು ಎನ್ನುತ್ತಾರೆ ವೈದ್ಯರು.