ತುಪ್ಪ ಸೇವನೆಯಿಂದ ದಪ್ಪಗಾಗುತ್ತಾರೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ದೇಹಕ್ಕೆ ಅಗತ್ಯವಾದ ಹಲವು ಜೀವಸತ್ವ ಹಾಗೂ ಪೋಷಕಾಂಶಗಳನ್ನು ಅದು ಒದಗಿಸುತ್ತದೆ.
ಹಸುವಿನ ತುಪ್ಪವನ್ನು ನಿತ್ಯ ಮಕ್ಕಳಿಗೆ ಊಟದ ಮೂಲಕ ತಿನ್ನಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳು ದಷ್ಟಪುಷ್ಟವಾಗಿ ಆರೋಗ್ಯದಿಂದ ಬೆಳೆಯುತ್ತಾರೆ.
ಮೈಗ್ರೇನ್ ಸಮಸ್ಯೆ ಹೊಂದಿರುವವರು ನಿತ್ಯ ಬೆಳಗ್ಗೆ ಹಾಗೂ ಸಂಜೆ ಎರಡು ಹನಿ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಹಾಕಿಕೊಂಡರೆ ತಲೆನೋವಿನಿಂದ ಮುಕ್ತಿ ಸಿಗುತ್ತದೆ.
ನಿಯಮಿತವಾಗಿ ತುಪ್ಪ ಸೇವಿಸುವುದರಿಂದ ತಲೆನೋವು, ದೃಷ್ಟಿಯ ಸಮಸ್ಯೆಗಳು ಕಾಡುವುದಿಲ್ಲ. ಒಂದು ಲೋಟ ಬೆಚ್ಚಗಿನ ಹಾಲಿಗೆ ಅರ್ಧ ಚಮಚ ತುಪ್ಪ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆಯಾಸದಂಥ ಸಮಸ್ಯೆಗಳು ದೂರವಾಗುತ್ತವೆ.
ಗಂಟು ನೋವಿಗೂ ಇದು ಹೇಳಿ ಮಾಡಿಸಿದ ಮದ್ದು. ಪ್ರತಿ ದಿನ ನೋವಿರುವ ಜಾಗಕ್ಕೆ ತುಪ್ಪದಿಂದ ಮಸಾಜ್ ಮಾಡಿದರೂ ಈ ನೋವು ಕಡಿಮೆಯಾಗುತ್ತದೆ.