ಹಸಿ ತರಕಾರಿಗಳಲ್ಲಿ ನಾರಿನಂಶ ಸಾಕಷ್ಟಿರುವುದರಿಂದ ಬೆಳಗಿನ ಬ್ರೇಕ್ ಫಾಸ್ಟ್ ಗೆ ಹಸಿ ತರಕಾರಿಗಳನ್ನು ಸೇವಿಸದೆ ಇರುವುದು ಒಳ್ಳೆಯದು. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು.
ಬೆಳಗ್ಗೆ ಖಾಲಿ ಹೊಟ್ಟೆಗೆ ಸಿಟ್ರಸ್ ಹಣ್ಣುಗಳನ್ನು ಅಂದರೆ ಕಿತ್ತಳೆ ಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಆಮ್ಲ ಉತ್ಪತ್ತಿ ಹೆಚ್ಚಿ ಎದೆಯುರಿ ಕಾಣಿಸಿಕೊಳ್ಳಬಹುದು.
ಬೆಳಗೆದ್ದು ಕಾಫಿ ಕುಡಿಯುವುದರಿಂದಲೂ ಜೀರ್ಣಾಂಗ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಕ್ಕರೆ ವಿಪರೀತ ಬೆರೆಸಿದ ಜ್ಯೂಸ್ ಗಳನ್ನು ಕುಡಿಯುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಂಡುಬಂದಾವು.
ಬೆಳಗಿನ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣು ತಿನ್ನುವುದರಿಂದ ರಕ್ತದಲ್ಲಿರುವ ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು. ಬೆಳಗಿನ ಖಾಲಿ ಹೊಟ್ಟೆಗೆ ಮೊಸರು ಸೇವಿಸುವುದು ಕೂಡಾ ಒಳ್ಳೆಯದಲ್ಲ.