ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಮತ್ತು ತರಕಾರಿಗಳಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಸೌತೆಕಾಯಿಯನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
-ಸೌತೆಕಾಯಿ ಕಡಿಮೆ ಕ್ಯಾಲೋರಿ ಮತ್ತು ನೀರಿನಾಂಶವನ್ನು ಹೊಂದಿರುತ್ತದೆ. ಹಾಗಾಗಿ ಇದು ತೂಕ ಇಳಿಸಿಕೊಳ್ಳಲು ಸಹಕಾರಿ.
-ಸೌತೆಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷ ಅಂಶವನ್ನು ಹೊರಹಾಕುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ.
ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’
-ಸೌತೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ ಅಧಿಕವಾಗಿರುವುದರಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯವಾಗಿಡುತ್ತದೆ.
-ಸೌತೆಕಾಯಿ ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿರುವ ಪೋಷಕಾಂಶಗಳು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ, ಮತ್ತು ಚರ್ಮವನ್ನು ತಂಪಾಗಿಸುತ್ತದೆ.