
ಬಾಯಿಹುಣ್ಣಿನ ಸಮಸ್ಯೆ ಉಷ್ಣದೇಹಿಗಳನ್ನು ಬಿಡದೆ ಕಾಡುತ್ತಿರುತ್ತದೆ. ಅದರ ನಿವಾರಣೆಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ.
ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು ದಿನದೊಳಗೆ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ. ದಿನದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಒಳ್ಳೆಯದು.
ಈ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರಂತೆ ಪುರುಷರು
ಬಾಯಿ ಹುಣ್ಣು ಆದ ಜಾಗಕ್ಕೆ ಜೇನನ್ನು ಸವರುವುದರಿಂದ ನೋವು ಕಡಿಮೆಯಾಗುತ್ತದೆ. ಗಂಟೆಗೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
ಲೋಳೆರಸವನ್ನು, ಇಲ್ಲವೇ ಪರಿಶುದ್ಧವಾದ ತೆಂಗಿನೆಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ಹುಣ್ಣು ಒಣಗುತ್ತದೆ. ನೋವು ಕಡಿಮೆಯಾಗುತ್ತದೆ.