ಬಿಸಿಲಿಗೆ ಹೋಗಿ ಮನೆಗೆ ಮರಳಿದ ಬಳಿಕ ಮನೆಯಲ್ಲೇ ತಯಾರಿಸಿ ಕುಡಿಯಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ.
ನೈಸರ್ಗಿಕವಾದ ಮತ್ತು ದೇಹದಲ್ಲಿ ಶಕ್ತಿ ಹೆಚ್ಚಿಸುವ ಈ ಎನರ್ಜಿ ಡ್ರಿಂಕ್ ಗಳನ್ನು ತಯಾರಿಸುವುದು ಬಲು ಸುಲಭ. ಹೆಸರುಕಾಳನ್ನು ಬಿಸಿಲಿನಲ್ಲಿ ಒಣಗಿಸಿ ನಯವಾದ ಪುಡಿಯಾಗಿ ಮಾಡಿ ಇಟ್ಟುಕೊಳ್ಳಿ. ಬೇಕಾದಾಗ ನೀರು ಹಾಗೂ ಬೆಲ್ಲ ಬೆರೆಸಿ ಕುಡಿಯುವುದರಿಂದ ದೇಹಕ್ಕೂ ತಂಪು.
ರಾಗಿಯನ್ನೂ ಇದೇ ರೀತಿಯಾಗಿ ಸೇವಿಸಬಹುದು. ಇದರ ಸೇವನೆಯಿಂದ ರಕ್ತಹೀನತೆ ಸಮಸ್ಯೆ ದೂರವಾಗಿ ಮೂಳೆಗಳು ಸದೃಢವಾಗುತ್ತವೆ. ಮಕ್ಕಳು, ಗರ್ಭಿಣಿಯರು ಮತ್ತು ಹಾಲು ಕೊಡುವ ಮಕ್ಕಳ ತಾಯಂದಿರಿಗೆ ಇದು ಬಹಳ ಒಳ್ಳೆಯದು.
ನೋವು ನಿವಾರಣೆಗೆ ಮನೆಯಲ್ಲಿಯೇ ಇದೆ ‘ಮದ್ದು’
ಎಳ್ಳು ಹಾಗೂ ಗಸೆ ಗಸೆ ಬೀಜವನ್ನು ನೆನೆಸಿಡಿ. ಇದಕ್ಕೆ ಬೆಲ್ಲ ಹಾಗೂ ಸಿಪ್ಪೆ ತೆಗೆದ ಬಾದಾಮಿಯನ್ನು ಸೇರಿಸಿ ನಯವಾಗಿ ರುಬ್ಬಿ, ಈ ಮಿಶ್ರಣಕ್ಕೆ ನೀರು ಬೆರೆಸಿ ಕುಡಿಯಿರಿ. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳೂ ಲಭ್ಯವಾಗುತ್ತವೆ.