ಬೇಸಿಗೆಯಲ್ಲಿ ಕಡಿಮೆ ನೀರು ಕುಡಿಯುವುದರಿಂದ ಮತ್ತು ದೇಹದಲ್ಲಿ ಉಷ್ಣತೆ ಹೆಚ್ಚುವುದರಿಂದ ಬಾಯಿಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು.
ಮನೆಯ ಹಿತ್ತಲಿನಲ್ಲಿ ತೊಂಡೆಕಾಯಿ ಬೆಳೆದಿದ್ದರೆ, ಅದರಿಂದ ನಾಲ್ಕಾರು ಎಲೆ ಗಳನ್ನು ಕೊಯ್ದು ತನ್ನಿ. ತುಸು ಬಾಡಿಸಿ ಜೀರಿಗೆ ಸೇರಿಸಿ ತೆಂಗಿನ ತುರಿ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿ. ಮಜ್ಜಿಗೆ ಸೇರಿಸಿ ಒಗ್ಗರಣೆ ಹಾಕಿ. ಈ ತಂಬುಳಿಯನ್ನು ಊಟದೊಂದಿಗೆ ಹಾಗೂ ಪಾನೀಯದಂತೆ ಸೇವಿಸುವುದರಿಂದ ಎರಡೇ ದಿನದಲ್ಲಿ ಬಾಯಿಹುಣ್ಣು ಸಮಸ್ಯೆ ದೂರವಾಗುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಯೇ…? ಇಲ್ಲಿದೆ ಪರಿಹಾರ
ಧನಿಯಾ ನೀರು, ಜೀರಿಗೆ ನೀರಿನಿಂದ ಪದೇ ಪದೇ ಬಾಯಿ ಮುಕ್ಕಳಿಸುವುದರಿಂದಲೂ ನಿಮ್ಮ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹುಣ್ಣಿನ ಮೇಲೆ ವಿನೇಗರ್ ಹಚ್ಚಿಕೊಂಡರೆ ಈ ನೋವು ಕಡಿಮೆಯಾಗುತ್ತದೆ.
ನಿತ್ಯ ಎಳನೀರು ಸೇವಿಸಿದರೆ ಬಾಯಿಹುಣ್ಣಿನ ಸಮಸ್ಯೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಉಳಿದಂತೆ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಿರಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.