ಮನೆಯಲ್ಲೇ ಕೆಲಸ ಮಾಡುವ ಆಯ್ಕೆ ಆರಂಭವಾದ ಮೇಲೆ ಮನೆಯ ಬಾತ್ ರೂಮ್ ಬಳಸುವುದೂ ಹೆಚ್ಚಿರಬಹುದು. ಹಾಗಾಗಿ ಬಾತ್ ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದ ಕೆಲಸಗಳಲ್ಲಿ ಒಂದು.
ಪ್ರತಿ ಬಾರಿ ಟಾಯ್ಲೆಟ್ ಬಳಸಿದ ಬಳಿಕ ಕಮೋಡ್ ಸೀಟ್ ಸ್ವಚ್ಛಗೊಳಿಸಿ. ಟಾಯ್ಲೆಟ್ ಪೇಪರ್ ಕೈಗೆಟುಕುವಷ್ಟೇ ದೂರದಲ್ಲಿಡಿ. ಸೋಂಕು ನಿವಾರಕ ಲಿಕ್ವಿಡ್ ಗಳನ್ನು ಕಮೋಡ್ ಗೆ ಸ್ಪ್ರೇ ಮಾಡಿ.
ಬಾತ್ ರೂಮನ್ನು ಕನಿಷ್ಟ ವಾರಕ್ಕೆರಡು ಬಾರಿ ಡೆಟಾಲ್ ಅಥವಾ ಫಿನಾಯಿಲ್ ಹಾಕಿ ಸ್ವಚ್ಛವಾಗಿ ತೊಳೆಯಿರಿ. ನೆಲದೊಂದಿಗೆ ಗೋಡೆ ತೊಳೆಯುವುದು ಬಹಳ ಮುಖ್ಯ. ಪ್ರತಿ ಬಾರಿ ನಲ್ಲಿ ಮುಟ್ಟಬೇಕಾಗುವುದರಿಂದ ಅದರ ಸ್ವಚ್ಛತೆಯತ್ತವೂ ಗಮನ ಕೊಡಿ.
ಒಬ್ಬರು ಟಾಯ್ಲೆಟ್ ಬಳಸಿದ ಕನಿಷ್ಠ ಐದು ನಿಮಿಷಗಳ ಬಳಿಕ ಇನ್ನೊಬ್ಬರು ಬಳಸಿ. ಬಾತ್ ರೂಮ್ ಚಿಲಕಗಳನ್ನು ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ. ಹ್ಯಾಂಡ್ ವಾಷ್ ಬಳಸುವಾಗಲೂ ಅಷ್ಟೇ, ಇಡೀ ಬಾಟಲ್ ಅನ್ನು ಕೈಯಿಂದ ಮುಟ್ಟದಿರಿ.
ಬಾತ್ ರೂಮ್ ಗೆ ಕಿಟಕಿ ಇದ್ದರೆ ಸ್ವಲ್ಪ ಹೊತ್ತು ಅದನ್ನು ತೆಗೆದಿಡಿ. ಹೊರಗಿನ ಗಾಳಿ ಒಳ ಬಂದು ರೂಮ್ ಫ್ರೆಶ್ ಆಗಲಿ.