ಅರ್ಧ ಬೆಂದ ಆಹಾರವನ್ನು ಹೆಚ್ಚು ಸೇವಿಸಿದಾಗ, ಹಾಳಾದ ವಸ್ತುಗಳನ್ನು ತಿಂದಾಗ ಅಥವಾ ಕೆಟ್ಟ ಬ್ಯಾಕ್ಟೀರಿಯಾಗಳು ಆವರಿಸಿಕೊಂಡ ಆಹಾರಗಳನ್ನು ತಿನ್ನುವುದರಿಂದ ಫುಡ್ ಪಾಯ್ಸನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು ಮನೆಮದ್ದುಗಳಿವೆ.
ಮೊದಲನೆಯದಾಗಿ ಎಲ್ಲಾ ಪದಾರ್ಥಗಳನ್ನು ತಾಜಾ ಇರುವಂತೆಯೇ ಸೇವಿಸಬೇಕು. ಹೊರಗಿನಿಂದ ತಂದ ಎಲ್ಲಾ ತರಕಾರಿ ಹಣ್ಣುಗಳನ್ನು ಸ್ವಚ್ಛವಾಗಿ ತೊಳೆದೇ ಬಳಸಬೇಕು. ಬ್ರೆಡ್ ತಯಾರಿಸಿದ ನಾಲ್ಕೈದು ದಿನದೊಳಗೆ ಸೇವಿಸಿ ಮುಗಿಸಬೇಕು.
ಹಾಗಿದ್ದೂ ವಿಷಾಹಾರ ಸೇವನೆಯಿಂದ ವಾಂತಿ ಅಥವಾ ಬೇಧಿ ಕಾಣಿಸಿಕೊಂಡರೆ ಚಹಾ ಪುಡಿ ಹಾಕಿ ನೀರು ಕುದಿಸಿ ಶುಂಠಿ ರಸ ಸೇರಿಸಿ ಕುಡಿದರೆ ವಾಂತಿ ಸಮಸ್ಯೆ ನಿಲ್ಲುತ್ತದೆ.
ತುಳಸಿ ಸೇವನೆಯಿಂದ ಹೊಟ್ಟೆಯಲ್ಲಿರುವ ಕಲ್ಮಶಗಳೆಲ್ಲಾ ದೂರವಾಗುತ್ತದೆ. ಇದರ ಕಷಾಯ ತಯಾರಿಸಿ ಕುಡಿಯುವುದು ಒಳ್ಳೆಯದು. ಚಿಟಿಕೆ ಏಲಕ್ಕಿ ಪುಡಿ ಕೂಡಾ ಕಷಾಯಕ್ಕೆ ಸೇರಿಸಬಹುದು. ಏಲಕ್ಕಿ ಜೀರ್ಣ ಕ್ರಿಯೆ ಸುಧಾರಿಸಿ ಫುಡ್ ಪಾಯ್ಸನ್ ಲಕ್ಷಣಗಳನ್ನು ದೂರ ಮಾಡುತ್ತದೆ. ಜೀರಿಗೆ, ಕೊತ್ತಂಬರಿ ಕುದಿಸಿ ಮಾಡಿದ ಕಷಾಯವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.