ಸೇವಿಸುವ ಆಹಾರದಲ್ಲಿ ಸಣ್ಣ ಏರುಪೇರಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಿದಾಗ ಅದನ್ನು ವೈದ್ಯರು ಫುಡ್ ಪಾಯ್ಸನ್ ಎನ್ನುತ್ತಾರೆ. ಅಡುಗೆ ಮನೆಯ ಕೆಲ ವಸ್ತುಗಳಿಂದಲೇ ಈ ಸಮಸ್ಯೆಗೆ ಮದ್ದು ಕಂಡು ಹಿಡಿಯಬಹುದು.
ಶುಂಠಿ, ಜೀರ್ಣಕ್ರಿಯೆಯನ್ನು ಸುಧಾರಿಸಿ ಹೊಟ್ಟೆಯನ್ನು ಹಗುರವಾಗಿ ಇಡುತ್ತದೆ. ವಾಂತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕುಡಿಯುವ ಚಹಾದಲ್ಲಿ ಶುಂಠಿ ಬೆರೆಸಿ ಸೇವಿಸಿದರೂ ಈ ಸಮಸ್ಯೆ ನಿವಾರಣೆ ಆಗುತ್ತದೆ.
ತುಳಸಿ ಸೇವನೆಯಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ. ಯಾವುದೇ ಬ್ಯಾಕ್ಟೀರಿಯಾ ಹೊಟ್ಟೆಯಲ್ಲಿ ಬೆಳೆಯುವುದನ್ನು ತಪ್ಪಿಸುತ್ತದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ಕುಡಿಯುವುದು ಅತ್ಯುತ್ತಮ ವಿಧಾನ. ಅಥವಾ ಕಷಾಯ ರೂಪದಲ್ಲೂ ಸೇವಿಸಬಹುದು.
ಏಲಕ್ಕಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಾಕರಿಕೆ, ವಾಂತಿ ಮೊದಲಾದ ಲಕ್ಷಣಗಳನ್ನು ದೂರಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಅಂಶಗಳಿದ್ದು, ಇದು ಫುಡ್ ಪಾಯ್ಸನ್ ಉಂಟು ಮಾಡುವ ಲಕ್ಷಣಗಳನ್ನು ಹೋಗಲಾಡಿಸುತ್ತದೆ. ತಲೆನೋವನ್ನೂ ನಿವಾರಿಸುತ್ತದೆ.
ನಿಂಬೆ ಹಣ್ಣಿನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ವೈರಸ್ ಅನ್ನು ಸಾಯಿಸುತ್ತದೆ. ಇದನ್ನು ಜ್ಯೂಸ್ ರೂಪದಲ್ಲಿ ಸೇವಿಸಿ. ಕೊತ್ತಂಬರಿ ಕಷಾಯವೂ ಪರಿಣಾಮಕಾರಿ. ಜೇನು, ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಅಜೀರ್ಣದ ಸಮಸ್ಯೆಯಾದರೂ ನೀವಿದನ್ನು ಪ್ರಯತ್ನಿಸಬಹುದು.