ಇಂದಿನ ಜೀವನ ಶೈಲಿಯಲ್ಲಿ ಮಕ್ಕಳಿಗೆ ಟಿವಿ ಮಾಮೂಲಿ ಎನ್ನುವಂತಾಗಿದೆ. ಮೊಬೈಲ್, ಟಿವಿ, ವಿಡಿಯೋ ಗೇಮ್ ಮಕ್ಕಳ ಸ್ನೇಹಿತರಂತಾಗಿವೆ. ಟಿವಿಯಲ್ಲಿ ಬರುವ ವಿಷ್ಯವನ್ನು ಸತ್ಯವೆಂದು ನಂಬಿ ನಡೆಯುತ್ತಾರೆ ಮಕ್ಕಳು. ಆದ್ರೆ ಮಕ್ಕಳಿಗೆ ಹೆಚ್ಚು ಹೆಚ್ಚು ಆಪ್ತರಾಗಿರುವ ಈ ಟಿವಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರ್ತಾ ಇದೆ.
ಅಮೆರಿಕಾದಲ್ಲಿ ನಡೆದ ಅಧ್ಯನವೊಂದರ ಪ್ರಕಾರ ಬೆಡ್ ರೂಂನಲ್ಲಿರುವ ಟಿವಿ ಹಾಗೂ ವಿಡಿಯೋ ಗೇಮ್ ಮಕ್ಕಳ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆಯಂತೆ. ಎರಡು ವರ್ಷಗಳಿಂದ ಸತತ ಅಧ್ಯಯನ ನಡೆಸಿದ ಸಂಶೋಧಕರು ಆತಂಕಕಾರಿ ವಿಷ್ಯವನ್ನು ಹೊರಗೆ ಹಾಕಿದ್ದರು.
ಬೆಡ್ ರೂಂನಲ್ಲಿ ಟಿವಿ ಅಥವಾ ವಿಡಿಯೋ ಗೇಮ್ ಇರುವುದ್ರಿಂದ ಮಕ್ಕಳ ಅಭ್ಯಾಸದಲ್ಲಿ ಏರುಪೇರಾಗುತ್ತದೆ. ಇದೊಂದೆ ಅಲ್ಲ ಸದಾ ಕುಳಿತೇ ಇರುವ ಮಕ್ಕಳ ತೂಕ ಸದ್ದಿಲ್ಲದೆ ಏರುತ್ತದೆ. ಆಹಾರ ಸೇವನೆ, ನಿದ್ರೆ ಕಡಿಮೆಯಾಗುವ ಜೊತೆಗೆ ಮಕ್ಕಳ ಮನಸ್ಸಿನ ಮೇಲೂ ಇದು ಪರಿಣಾಮ ಬೀರುತ್ತದೆ. ಇದ್ರ ಜೊತೆಗೆ ಮಕ್ಕಳು ಹೆಚ್ಚು ಹಿಂಸಾರೂಪಿಗಳಾಗ್ತಾರಂತೆ.
ಟಿವಿಯಲ್ಲಿ ಬರುವ ವಿಷ್ಯಗಳನ್ನು ಸತ್ಯವೆಂದು ನಂಬಿ ಅದನ್ನು ಅನುಸರಿಸಲು ಹೋಗ್ತಾರೆ. ಬ್ಲೂ ವೇಲ್ ಗೇಮ್ ಇದಕ್ಕೆ ಉತ್ತಮ ಉದಾಹರಣೆಯಾಗಿತ್ತು. ಇದೊಂದೇ ಅಲ್ಲ ಇನ್ನೂ ಅನೇಕ ಸ್ಟಂಟ್ ಗಳನ್ನು ನೋಡಿ ಅದನ್ನು ಅನುಸರಿಸಲು ಹೋಗಿ ಮಕ್ಕಳು ಸಾವನ್ನಪ್ಪಿದ್ದಾರೆ. ಹಾಗಾಗಿ ಮಕ್ಕಳನ್ನು ಟಿವಿ ಹಾಗೂ ವಿಡಿಯೋ ಗೇಮ್, ಮೊಬೈಲ್ ಮಾಧ್ಯಮದಿಂದ ಆದಷ್ಟು ದೂರವಿಡುವುದು ಸೂಕ್ತ.