ಪಪ್ಪಾಯ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಅದರ ಬೀಜಗಳು ಕಹಿ ಎಂದು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆಯುತ್ತೇವೆ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ?
ಪಪ್ಪಾಯ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗಿರುತ್ತದೆಯಂತೆ. ಹಾಗೂ ಇದು ಬೊಜ್ಜನ್ನು ಕರಗಿಸುತ್ತದೆಯಂತೆ. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನಂತಹ ಸೋಂಕುಗಳು ನಿವಾರಣೆಯಾಗುತ್ತದೆಯಂತೆ.
ಪಪ್ಪಾಯ ಬೀಜಗಳನ್ನು ತಿನ್ನುವುದರಿಂದ ಕರುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೇ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಅನುಭವಿಸುವ ನೋವನ್ನು ನಿವಾರಿಸಲು ಈ ಬೀಜಗಳು ಸಹಕಾರಿಯಂತೆ.