ಮೊಸರು ಹೊಟ್ಟೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.
ಮೊಸರಿನಲ್ಲಿ ಪ್ರೊಟೀನ್ ಜೊತೆಗೆ ವಿಟಮಿನ್ ಬಿ, ಕ್ಯಾಲ್ಸಿಯಂ ಗುಣವಿದೆ. ಇದು ಮೂಳೆ ಮತ್ತು ಹಲ್ಲುಗಳನ್ನು ದೃಢವಾಗಿಡುತ್ತದೆ. ಹಾಲಿಗಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮೊಸರಿನಲ್ಲಿರುತ್ತದೆ.
ಅಜೀರ್ಣದ ಸಮಸ್ಯೆಯಿಂದ ಉಂಟಾದ ಹೊಟ್ಟೆನೋವು, ಮಲಬದ್ಧತೆ ನಿವಾರಣೆಗೆ ಮೊಸರು ಸೇವಿಸಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದಪ್ಪವಾಗಲು ಬಯಸುವವರು ನಿತ್ಯ ಮೊಸರಿಗೆ ಒಂದು ಚಮಚ ಸಕ್ಕರೆ ಸೇರಿಸಿ ಕುಡಿಯುವುದು ಆರೋಗ್ಯಕರವೂ ಹೌದು.
ಬೇಸಿಗೆಯಲ್ಲಿ ಬಿಸಿಯ ಬೇಗೆಯಿಂದ ತಪ್ಪಿಸಿಕೊಳ್ಳಲು ಕಡೆದ ಮಜ್ಜಿಗೆ ಸೇವಿಸಿ. ಇದು ದೇಹವನ್ನು ತಂಪಾಗಿಸುತ್ತದೆ, ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ.
ಮೂಲವ್ಯಾಧಿ ಸಮಸ್ಯೆ ಇರುವವರು ನಿತ್ಯ ಮೊಸರು ಅಥವಾ ಮಜ್ಜಿಗೆ ಸೇವಿಸುವುದರಿಂದ ಮಲವಿಸರ್ಜಿಸುವಾಗ ಉಂಟಾಗುವ ನೋವು, ಸ್ರಾವ ಕಡಿಮೆಯಾಗುತ್ತದೆ.