ದೇಹದ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಮನಸ್ಸಿನ ನೆಮ್ಮದಿ ಮತ್ತು ಸಂತೋಷಕ್ಕೆ ಧ್ಯಾನವೂ ಬಹಳ ಮುಖ್ಯ. ಇವುಗಳ ಪೈಕಿ ಯಾವುದು ಮೊದಲು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ, ಇಲ್ಲಿ ಕೇಳಿ.
ವ್ಯಾಯಾಮದಂತೆ ನಿತ್ಯ ಧ್ಯಾನ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ದಿನವಿಡೀ ನಿಮ್ಮನ್ನು ಉಲ್ಲಾಸದಿಂದಿಡುವ ಯೋಗ ಚೈತನ್ಯದಿಂದ ಕೆಲಸಗಳನ್ನು ಮಾಡುವಂತೆಯೂ ನೋಡಿಕೊಳ್ಳುತ್ತದೆ.
ವ್ಯಾಯಾಮ ಮಾಡುವ ಮುನ್ನ ಕೆಲವು ನಿಮಿಷಗಳ ಹೊತ್ತು ಧ್ಯಾನ ಮಾಡುವುದು ಒಳ್ಳೆಯದು. ಏಕೆಂದರೆ ದೇಹಕ್ಕೆ ಅನುಗುಣವಾಗಿ ಯಾವ ವ್ಯಾಯಾಮಗಳನ್ನು ಮಾಡಬೇಕು ಎಂಬುದನ್ನು ಧ್ಯಾನ ಹೇಳಿ ಕೊಡುತ್ತದೆ.
ಧ್ಯಾನದ ಬಳಿಕ ವ್ಯಾಯಾಮ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಇದು ನಿಮ್ಮನ್ನು ಹೆಚ್ಚು ವ್ಯಾಯಾಮ ಮಾಡುವಂತೆ ಪ್ರೇರೇಪಿಸುತ್ತದೆ.
ವ್ಯಾಯಾಮದ ಬಳಿಕ ಧ್ಯಾನ ಮಾಡಲು ಕುಳಿತುಕೊಂಡರೆ ದೇಹ ಸುಸ್ತಾಗಿರುತ್ತದೆ. ನಿಮಗೆ ಏಕಾಗ್ರತೆಯ ಕೊರತೆಯಾಗಬಹುದು. ಹಾಗಾಗಿ ಮೊದಲ ಆದ್ಯತೆ ಧ್ಯಾನಕ್ಕೇ ಇರಲಿ ಬಳಿಕ ವ್ಯಾಯಾಮ ಮಾಡಿ.