ದಪ್ಪಗಾಗಬೇಕು ಎಂದು ಬಯಸುವವರು ಹಲವು ಪ್ರಯತ್ನಗಳು ಮಾಡಿ ಸೋತವರು ಇಲ್ಲಿ ಕೇಳಿ. ಸುಲಭದಲ್ಲಿ ದೇಹ ತೂಕ ಹೆಚ್ಚಿಸುವ ವಿಧಾನ ಇಲ್ಲಿದೆ.
ಕ್ರಮೇಣ ನಿಮ್ಮ ಊಟದ ಪ್ರಮಾಣವನ್ನು ಹೆಚ್ಚಿಸುತ್ತಾ ಬನ್ನಿ. ಒಂದೇ ದಿನ ಇದು ಸಾಧ್ಯವಾಗದಿರಬಹುದು. ಎರಡು ತುತ್ತು ನಿತ್ಯ ಹೆಚ್ಚು ಸೇವಿಸುವುದರಿಂದ ಇದು ಸಾಧ್ಯವಾಗುತ್ತದೆ. ಒಂದು ಊಟಕ್ಕಿಂತ ಮತ್ತೊಂದು ಊಟದ ಮಧ್ಯೆ ಏನನ್ನಾದರೂ ಸೇವಿಸಿ.
ಒಣ ಹಣ್ಣುಗಳ ಸೇವನೆಗೆ ಆದ್ಯತೆ ನೀಡಿ. ಬೆಳಗೆದ್ದು ಖಾಲಿ ಹೊಟ್ಟೆಗೆ ನೀರಿನಲ್ಲಿ ನೆನೆಸಿಟ್ಟ ಬಾದಾಮಿ ತಿನ್ನಿ. ಓಟ್ಸ್ ಮೀಲ್ ಪೋಷಕಾಂಶ ಭರಿತ ಆಹಾರವಾಗಿದ್ದು ಇದು ತೂಕವನ್ನು ಹೆಚ್ಚಿಸುತ್ತದೆ.
ಚಾಕೊಲೇಟ್ ಅಥವಾ ಚಾಕೊಲೇಟ್ ಉತ್ಪನ್ನಗಳನ್ನು ಸೇವಿಸಿ. ಕೊಬ್ಬಿನಂಶ ಅಧಿಕ ಇರುವ ಡಾರ್ಕ್ ಚಾಕೊಲೇಟ್ ನಿಮ್ಮಹಸಿವನ್ನು ಹೆಚ್ಚಿಸುತ್ತವೆ. ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಸಿಹಿ ಗೆಣಸು ಸೇವಿಸಿ. ಇದರಿಂದಲೂ ನಿಮ್ಮ ದೇಹ ತೂಕ ಹೆಚ್ಚುತ್ತದೆ.
ಹಾಲು, ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಚೀಸ್, ಪನ್ನೀರ್ ಸತತ ಸೇವನೆಯಿಂದ ತೂಕ ಹೆಚ್ಚುತ್ತದೆ.