
ಜಂಕ್ ಫುಡ್ ಗಳನ್ನು ಸೇವಿಸಿ ದೇಹತೂಕ ವಿಪರೀತ ಹೆಚ್ಚಿದೆಯೇ? ಇದರಿಂದ ಮುಕ್ತಿ ಬೇಕು ಎಂದು ಡಯಟ್ ಮೊರೆ ಹೋಗಿದ್ದೀರಾ, ಹಾಗಿದ್ದರೆ ಇಲ್ಲಿ ಕೇಳಿ…..
ವಿಪರೀತ ಬೊಜ್ಜಿನಿಂದ ದೇಹ ವಿಚಿತ್ರವಾಗಿ ಕಾಣಿಸಿಕೊಳ್ಳುತ್ತಿದೆಯೇ, ಹಾಗಿದ್ದರೆ ನಿತ್ಯ ಕಡಿಮೆ ಊಟ ಮಾಡುವುದರ ಜೊತೆಗೆ ಹೆಚ್ಚು ಉಪ್ಪು ಹಾಗೂ ಸಕ್ಕರೆ ಸೇರಿರುವ ತಿನಿಸುಗಳಿಂದ ದೂರವಿರಿ. ಆಗ ನಿಮ್ಮ ಬೊಜ್ಜು ಕಡಿಮೆಯಾಗುತ್ತದೆ.
ಬೆವರು ದೇಹದಿಂದ ಹೊರಹೋದಷ್ಟು ಕ್ಯಾಲೊರಿ ಕರಗುತ್ತದೆ. ಇದಕ್ಕಾಗಿ ಜಿಮ್ ಗೇ ಹೋಗಬೇಕಿಲ್ಲ, ಮನೆಯಲ್ಲಿ. ಹಿತ್ತಲಲ್ಲಿ ಕೆಲಸ ಮಾಡಿದರೂ ಸಾಕು. ಹತ್ತಾರು ಬಾರಿ ಮೆಟ್ಟಿಲು ಹತ್ತಿ ಇಳಿಯುವುದರಿಂದ, ಜಾಗಿಂಗ್ ಮಾಡುವುದರಿಂದ ತೂಕ ಇಳಿಯುತ್ತದೆ.
ರಾತ್ರಿ ಮಲಗುವ ಮುನ್ನ ಒಂದು ಚಮಚ ಕಾಮಕಸ್ತೂರಿ ಬೀಜಕ್ಕೆ ಒಂದು ಲೋಟ ನೀರು ಹಾಕಿ ಮುಚ್ಚಿಡಿ. ಮರುದಿನ ಬೆಳಗ್ಗೆ ಈ ನೀರಿಗೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದಲೂ ದೇಹದ ಅನಗತ್ಯ ಬೊಜ್ಜು ಕರಗುತ್ತದೆ. ಇದನ್ನು ಸತತ ಹದಿನೈದು ದಿನಗಳ ತನಕ ಮಾಡಿ, ಚಮತ್ಕಾರಿಕ ಬದಲಾವಣೆಯನ್ನು ನೀವು ನೋಡಿ.