ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಾಡುವುದು ಮಹಿಳೆಯರನ್ನೇ. ತೂಕ ಕಳೆದುಕೊಳ್ಳುವುದು, ನಿದ್ರಾಹೀನತೆ, ಅತಿಯಾಗಿ ಬೆವರುವುದು ಮೊದಲಾದ ಲಕ್ಷಣಗಳನ್ನು ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಕೆಲವು ವಸ್ತುಗಳ ಸೇವನೆಯಿಂದ ದೂರ ಉಳಿಯುವುದರಿಂದ ಇದರ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು.
ಎಲೆಕೋಸು ಅಥವಾ ಕ್ಯಾಬೇಜ್ ಸೇವನೆಯಿಂದ ಥೈರಾಯ್ಡ್ ಲಕ್ಷಣಗಳು ಹೆಚ್ಚುವ ಸಾಧ್ಯತೆಗಳಿವೆ, ಹಾಗಾಗಿ ಇದರಿಂದ ದೂರವಿದ್ದಷ್ಟು ಒಳ್ಳೆಯದು.
ಅಡುಗೆ ಮನೆಯಲ್ಲಿ ಬಳಸುವ ಸೋಯಾಬೀನ್ ಸೇವನೆಯಿಂದ ದೇಹದಲ್ಲಿ ಥೈರಾಕ್ಸಿನ್ ಪ್ರಮಾಣ ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ಒಳಗಾಗಿರುವವರಿಗೆ ಈ ಏರುಪೇರು ಒಳ್ಳೆಯದಲ್ಲ. ಹಾಗಾಗಿ ಈ ರೋಗವಿರುವವರು ಸೋಯಾ ಉತ್ಪನ್ನಗಳಿಂದ ದೂರವಿದ್ದಷ್ಟು ಒಳ್ಳೆಯದು.
ಉಪ್ಪಿನ ಬಳಕೆಯನ್ನು ನಿಯಂತ್ರಿಸುವುದರಿಂದಲೂ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಬಹುದು. ನಿಮಗೆಲ್ಲಾ ತಿಳಿದಿರುವಂತೆ ಅಯೋಡಿನ್ ಕೊರತೆಯಾದಾಗಲೇ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಅತಿಯಾಗಿ ಉಪ್ಪನ್ನು ಬಳಸದೆ ಹಿತ ಮಿತವಾಗಿ ಬಳಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿ.