alex Certify ‘ಥೈರಾಯ್ಡ್’ ಗ್ರಂಥಿ ಆರೋಗ್ಯಕ್ಕೆ ಬೇಕು ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಥೈರಾಯ್ಡ್’ ಗ್ರಂಥಿ ಆರೋಗ್ಯಕ್ಕೆ ಬೇಕು ಈ ಆಹಾರ

ಥೈರಾಯ್ಡ್ ಇತ್ತೀಚಿಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಮತ್ತು ಆಹಾರಶೈಲಿ ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮುಖ್ಯ. ಥೈರಾಯ್ಡ್ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು.

ತೆಂಗಿನ ಎಣ್ಣೆ

ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತೆಂಗಿನ ಎಣ್ಣೆ ತುಂಬಾ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇರುವವರು ದಿನಾ ಒಂದೆರೆಡು ಚಮಚ ತೆಂಗಿನ ಎಣ್ಣೆಯನ್ನು ಆಹಾರದ ಜೊತೆ ಮಿಕ್ಸ್ ಮಾಡಿ ತಿಂದು ಥೈರಾಯ್ಡ್ ಹಾರ್ಮೋನ್ ನಿಯಂತ್ರಣದಲ್ಲಿಡಬಹುದು.

ಮೊಸರು

ಇದರಲ್ಲಿರುವ ವಿಟಮಿನ್ ಡಿ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಥೈರಾಯ್ಡ್ ಸಮಸ್ಯೆ ನಿಯಂತ್ರಣಕ್ಕೆ ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕು.

ಪಾಲಾಕ್

ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ ಇದ್ದು, ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಸಹಕಾರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಸಕ್ಕರೆ ಅಂಶ ಹಾಗೂ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಸಿಹಿ ಕುಂಬಳಕಾಯಿ ಬೀಜ

ಇದರಲ್ಲಿ ಸತು ಅಂಶವಿದ್ದು, ಥೈರಾಯ್ಡ್ ಗ್ರಂಥಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೇಬು

ಸೇಬಿನಲ್ಲಿರುವ ಪೆಕ್ಟಿನ್ ನಾರಿನಂಶ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತೆ. ಹಾಗೆ ಥೈರಾಯ್ಡ್ ಸಮಸ್ಯೆ ಇರುವವರು ಈ ಹಣ್ಣಿನ ಪ್ರಯೋಜನ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...