ಇತ್ತೀಚೆಗಷ್ಟೇ ತೆಂಗಿನೆಣ್ಣೆಯಲ್ಲಿ ಕೊರೊನಾ ದೂರ ಮಾಡುವ ಅಂಶಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದರ ಸತ್ಯಾಸತ್ಯತೆ ಬಗ್ಗೆ ತಿಳಿಯೋಣ.
ತೆಂಗಿನೆಣ್ಣೆಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂಬುದಕ್ಕೆ ಸುಮಾರು ವರ್ಷಗಳಿಂದ ಅದನ್ನು ಬಳಸುತ್ತಿರುವುದೇ ಸಾಕ್ಷಿ. ಪ್ರಸಿದ್ಧ ವೈದ್ಯಕೀಯ ಜರ್ನಲ್ ಒಂದು ತನ್ನ ವಿಮರ್ಶೆ ಲೇಖನವೊಂದರಲ್ಲಿ ತೆಂಗಿನೆಣ್ಣೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದ್ದು, ಇದು ಸೂಕ್ಷ್ಮಾಣು ವೈರಸ್ ಗಳನ್ನು ನಾಶ ಮಾಡುವ ಗುಣ ಹೊಂದಿದೆ ಎನ್ನಲಾಗಿದೆ.
ಭಾರತೀಯರು ಬಳಸುವ ಎಣ್ಣೆ ಹಾಗೂ ತುಪ್ಪದಲ್ಲಿರುವ ಕೊಬ್ಬಿನಂಶ ದೇಹಕ್ಕೆ ಅವಶ್ಯಕವಾಗಿದ್ದು, ಇದು ಚಯಾಪಚಯ ಕ್ರಿಯೆಗೆ ಚುರುಕು ನೀಡಿ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡುತ್ತದೆ.
ತೆಂಗಿನೆಣ್ಣೆ ಹೊಟ್ಟೆ ಹಾಳು ಮಾಡುವ ಲೆಸ್ಟೇರಿಯಾ ಬ್ಯಾಕ್ಟೀರಿಯಾ, ಅಲ್ಸರ್ ಉಂಟುಮಾಡುವ ಹೆಲಿಯೋಬ್ಯಾಕ್ಟರ್ ಪೈಲೊರಿ, ಮೊದಲಾದ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ತ್ವಚೆಗೆ ಅಲರ್ಜಿಯನ್ನುಂಟು ಮಾಡುವ ಶಿಲೀಂಧ್ರಗಳನ್ನೂ ಕೊಲ್ಲುತ್ತದೆಯಂತೆ. ಹಾಗಿದ್ದರೆ ತಡೆ ಯಾಕೆ ಇಂದಿನಿಂದಲೇ ತೆಂಗಿನೆಣ್ಣೆ ಬಳಕೆ ರೂಢಿಸಿಕೊಳ್ಳಿ. ಆದರೆ ಅದಕ್ಕೂ ಮುನ್ನ ದೇಹಕ್ಕೆ ಇದು ಒಗ್ಗಿಕೊಳ್ಳುತ್ತದಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.