ತೂಕ ನಷ್ಟವಾಗಲು, ಬೊಜ್ಜು ಕರಗಲು ಕೆಲವರು ಹರಸಾಹಸ ಮಾಡುತ್ತಾರೆ. ಪ್ರತಿದಿನ ಬೆಳಿಗ್ಗೆ, ಸಂಜೆಯ ವೇಳೆ ವಾಕಿಂಗ್, ರನ್ನಿಂಗ್, ವ್ಯಾಯಾಮ, ಯೋಗ, ಇನ್ನು ಹಲವು ಬಗೆಯ ಸರ್ಕಸ್ ಮಾಡುತ್ತಾರೆ. ಆದರೆ ತೂಕ ನಷ್ಟವಾಗಲು ವಾಕಿಂಗ್ ಮತ್ತು ರನ್ನಿಂಗ್ ನಲ್ಲಿ ಯಾವುದು ಉತ್ತಮ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ.
ತೂಕ ನಷ್ಟವಾಗಲು ವಾಕಿಂಗ್ ಹಾಗೂ ರನ್ನಿಂಗ್ ಎರಡೂ ಸಹಕಾರಿಯೇ. ಆದರೆ ರನ್ನಿಂಗ್ ನಿಂದ ತೂಕ ಬೇಗ ಕಡಿಮೆಯಾಗುತ್ತದೆ. ವಾಕಿಂಗ್ ನಿಂದ ತೂಕ ನಷ್ಟವಾಗಲು ತುಂಬಾ ಸಮಯ ಬೇಕಾಗುತ್ತದೆ.
ಹಾಗೇ ಮೊಣಕಾಲಿನ ಸಮಸ್ಯೆ ಇರುವವರು ರನ್ನಿಂಗ್ ಮಾಡುವ ಬದಲು ವಾಕಿಂಗ್ ಮಾಡುವುದೇ ಉತ್ತಮ. ಇಲ್ಲವಾದರೆ ಅವರ ಮೊಣಕಾಲಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲದೇ ಹೃದಯದ ಸಮಸ್ಯೆ ಇರುವವರು ಕೂಡ ರನ್ನಿಂಗ್ ಮಾಡಿ ಹೃದಯಕ್ಕೆ ಅಪಾಯ ತಂದುಕೊಳ್ಳುವ ಬದಲು ವಾಕಿಂಗ್ ಮಾಡುವುದೇ ಉತ್ತಮ. ಹಾಗಾಗಿ ತೂಕ ನಷ್ಟ ಮಾಡಿಕೊಳ್ಳಲು ನಿಮಗನುಕೂಲವಾಗುವಂತೆ ಯಾವುದು ಉತ್ತಮ ಎಂಬುದನ್ನು ನೀವೇ ಆಯ್ಕೆ ಮಾಡಿ.