ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡವರಿಗಾಗಿ ಅಮೆಜಾನ್ ಡಯಟ್ ಬ್ರೇಸ್ಲೆಟ್ ಯಂತ್ರವೊಂದನ್ನು ಪರಿಚಯಿಸಿದೆ. ಡಯಟ್‌ಗೂ ಈ ಬ್ರೇಸ್ಲೆಟ್ ಸಂಬಂಧ ಏನು ಅನ್ನೋ ಪ್ರಶ್ನೆ ಕಾಡುವುದು ಕಾಮನ್. ಇದಕ್ಕಾಗಿ ಉತ್ತರ ಇಲ್ಲಿದೆ ನೋಡಿ.
ಹೌದು, ಡಯಟ್ ಮಾಡುತ್ತಿರುವವರು ಕೆಲವೊಮ್ಮೆ ತೀರಾ ಹಸಿವಾದಾಗ ಹೆಚ್ಚಿನದಾಗಿ ಆಹಾರ ಸೇವಿಸಿ ಬಿಡುತ್ತಾರೆ. ತಿಂದಾದ ಮೇಲೆ ಹೆಚ್ಚಿನ ಆಹಾರ ಅಥವಾ ಸ್ನಾಕ್ಸ್ ತಿಂದೆವಲ್ಲಾ ಎಂದು ಯೋಚನೆ ಮಾಡುತ್ತಾರೆ. ಅಂತವರಿಗೆ ಇದು ನೆರವಾಗಲಿದೆ. ಆಹಾರ ಸೇವಿಸುವಾಗ ನೀವೇನಾದರೂ ಹೆಚ್ಚಿನ ಆಹಾರ ಸೇವಿಸಿದ್ದೇ ಆಗಿದ್ದಲ್ಲಿ ಅಮೆಜಾನ್ ಪರಿಚಯಿಸಿದ ಬ್ರೇಸ್‌ಲೈಟ್ ವಿದ್ಯುತ್ ಶಾಕ್ ನೀಡುವ ಮೂಲಕ ಎಚ್ಚರಿಕೆ ನೀಡುತ್ತದೆ. ಇದರಲ್ಲಿ 350 ವೋಲ್ಟ್ ವಿದ್ಯುತ್ ಶಾಕ್ ಅಳವಡಿಸಲಾಗಿದೆ.
ಇನ್ನು ಈ ಬ್ರೇಸ್‌ಲೈಟ್ ಕೇವಲ ತೂಕ ಕಡಿಮೆ ಮಾಡಲು ಅಷ್ಟೇ ಅಲ್ಲ ಕ್ಯಾಲೊರಿಯನ್ನು ಪರಿಶೀಲಿಸಬಹುದು. ಕ್ಯಾಲೋರಿ ಹೆಚ್ಚಾದರೆ ಅದನ್ನೂ ಎಚ್ಚರಿಸುತ್ತದೆ. ಹಾಗೆಯೇ ಹೆಚ್ಚಾಗಿ ಟಿ.ವಿ ವೀಕ್ಷಣೆ, ಇಂಟರ್ ನೆಟ್ ಬಳಕೆ ಮಾಡಿದರೂ ಹೇಳುತ್ತದೆ. ಇಂತಹ ವಿಶಿಷ್ಟ್ಯವಾದ ಬ್ರೇಸ್‌ಲೈಟ್‌ನ ಬೆಲೆ 20,499 ರೂಪಾಯಿಗಳು.