ತೆಳ್ಳಗೆ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಡಯೆಟ್, ವ್ಯಾಯಾಮಾ, ಜಿಮ್, ವಾಕಿಂಗ್ ಎಂದು ಮಾಡುವುದಕ್ಕೆ ಸರಿಯಾಗಿ ಸಮಯ ಸಿಗುವುದಿಲ್ಲ ಎಂಬ ದೂರು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ. ಇನ್ನು ಕೆಲವರಿಗೆ ಡಯೆಟ್ ಮಾಡುವುದೇ ದೊಡ್ಡ ಹಿಂಸೆ. ನಿಮ್ಮ ದೇಹ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳುವುದಕ್ಕೆ ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ.
ಬೆಳಿಗ್ಗೆ ಎದ್ದಾಕ್ಷಣ ಬ್ರೆಷ್ ಮಾಡಿ ಒಂದು ಗ್ಲಾಸ್ ಬಿಸಿನೀರು ಕುಡಿಯಿರಿ ಅರ್ಧ ಗಂಟೆ ಬಿಟ್ಟು 1 ಬಾಳೆ ಹಣ್ಣು ಅಥವಾ 5 ಬಾದಾಮಿಯನ್ನು ತಿನ್ನಿರಿ.
ಇನ್ನು ಬೆಳಿಗ್ಗಿನ ತಿಂಡಿಗೆ ಅವಲಕ್ಕಿ, ಉಪ್ಪಿಟ್ಟು, ಮನೆಯಲ್ಲಿಯೇ ಮಾಡಿದ ಇಡ್ಲಿ, ದೋಸೆಯನ್ನು ತಿನ್ನಿರಿ. ಆದರೆ ತಿನ್ನುವ ಪ್ರಮಾಣ ಸ್ವಲ್ಪ ಕಡಿಮೆ ಇರಲಿ. 8 ಗಂಟೆಯೊಳಗೆ ನಿಮ್ಮ ತಿಂಡಿಯನ್ನು ಮುಗಿಸಿ. ಇನ್ನು 10 ಗಂಟೆಯ ಸಮಯಕ್ಕೆ ಯಾವುದಾದರೂ ಒಂದು ಹಣ್ಣು ತಿನ್ನಿ ಅಥವಾ ಎಳನೀರು ಕುಡಿಯಿರಿ.
ಮಧ್ಯಾಹ್ನ ಊಟಕ್ಕೆ ಅನ್ನ, ಚಪಾತಿ, ಬೇಳೆಸಾರು, ಕಾಳು ಪಲ್ಯವನ್ನು ತಿನ್ನಿರಿ. ಅನ್ನ 1 ಕಪ್ ಮಾತ್ರ ತಿನ್ನಿ. ಮಧ್ಯಾಹ್ನ 3 ಗಂಟೆ ಸಮಯಕ್ಕೆ ಯಾವುದಾದರೂ ಹಣ್ಣು ಅಥವಾ ಡ್ರೈ ಪ್ರೂಟ್ಸ್ ತಿನ್ನಿರಿ. ರಾತ್ರಿ 7 ಗಂಟೆಯೊಳಗೆ ಊಟ ಮುಗಿಸಿ. ಹಾಗೇ ಊಟ ಹಿತ ಮಿತವಾಗಿರಲಿ.
ಇದರ ಮಧ್ಯೆ 12 ಗ್ಲಾಸ್ ನೀರನ್ನು ಕುಡಿಯುವುದನ್ನು ಮರೆಯಬೇಡಿ. 20 ನಿಮಿಷ ವಾಕಿಂಗ್ ಅಥವಾ ಯಾವುದಾದರೂ ಕಾರ್ಡಿಯೋ ವ್ಯಾಯಾಮ ಮಾಡಿ. ಬೇಗನೆ ತೂಕ ಇಳಿಕೆಯಾಗುತ್ತದೆ.