ಮಹಿಳೆಯರಲ್ಲಿ ತಿಂಗಳ ಋತುಸ್ರಾವದ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಈ ನೋವು ದೇಹದ ಬೇರೆ ಬೇರೆ ಭಾಗಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ.
ಕರಿಎಳ್ಳನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಕುಡಿಯಿರಿ ಅಥವಾ ಕರಿಎಳ್ಳನ್ನು ಹುರಿದು ನಂತರ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿಗೆ ಕಾಲು ಚಮಚ ಕರಿಎಳ್ಳಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ಸೇವಿಸಿದರೆ ಮುಟ್ಟಿನ ದಿನಗಳಲ್ಲಿ ಬರುವ ನೋವನ್ನು ನಿವಾರಿಸಬಹುದು.
ಮೂರ್ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಕತ್ತರಿಸಿ ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ನೀರನ್ನು ಶೋಧಿಸಿ ಇದನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ನೋವನ್ನು ಗುಣ ಪಡಿಸಬಹುದು. ಅದರೊಂದಿಗೆ ಹಸಿರು ತರಕಾರಿಗಳನ್ನು ಹೆಚ್ಚು ತಿನ್ನಿ. ಹಾಲು, ಬಾದಾಮಿಗಳನ್ನು ಸೇವಿಸಿ. ಚಹಾ ಮತ್ತು ಕಾಫಿಯನ್ನು ಕಡಿಮೆ ಮಾಡಿ.