ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ ಜ್ವರದ ಸಮಸ್ಯೆಗಳಿಗೆ ಈ ವಸ್ತುಗಳಿಂದ ಔಷಧ ತಯಾರಿಸಬಹುದು. ಅವುಗಳು ಯಾವುದೆಂದಿರಾ?
ಬೆಳ್ಳುಳ್ಳಿಯಲ್ಲಿ ಅತ್ಯಧಿಕ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಹಸಿಯಾಗಿ ಸೇವಿಸುವುದರಿಂದ ಮಕ್ಕಳೂ ಸೇರಿದಂತೆ ಪ್ರತಿಯೊಬ್ಬರೂ ಶೀತ, ಜ್ವರದಿಂದ ರಕ್ಷಣೆ ಪಡೆದುಕೊಳ್ಳಬಹುದು.
ಹಸಿ ಶುಂಠಿ ಸೇವನೆಯಿಂದ ಗಂಟಲಿನ ಕಿರಿಕಿರಿ, ನೋವು, ಕೆಮ್ಮುವಿನ ಲಕ್ಷಣಗಳು ದೂರವಾಗುತ್ತವೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವಾರದಲ್ಲಿ ಎರಡರಿಂದ ಮೂರು ಬಾರಿ ಅಣಬೆ ಸೇವಿಸುವುದರಿಂದ ಶರೀರದ ರೋಗ ಪ್ರತಿರೋಧಕ ಶಕ್ತಿ ವೃದ್ದಿಯಾಗುತ್ತದೆ. ಅರಿಶಿನವನ್ನು ಆಹಾರದಲ್ಲಿ ಬಳಸುವುದರಿಂದ, ಬಿಸಿ ಹಾಲಿಗೆ ಸೇರಿಸಿ ಕುಡಿಯುವುದರಿಂದ, ಕಷಾಯ ಕುಡಿಯುವುದರಿಂದ ಶೀತ, ಕೆಮ್ಮುವಿನ ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ.