alex Certify ಚಳಿಗಾಲದ ಶೀತ, ಕಫದ ಸಮಸ್ಯೆಯಿಂದ ದೂರವಿರಲು ಏಲಕ್ಕಿಯನ್ನು ಈ ರೀತಿಯಾಗಿ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದ ಶೀತ, ಕಫದ ಸಮಸ್ಯೆಯಿಂದ ದೂರವಿರಲು ಏಲಕ್ಕಿಯನ್ನು ಈ ರೀತಿಯಾಗಿ ಬಳಸಿ

ಚಳಿಗಾಲದ ಮಾಲಿನ್ಯದಿಂದ ಶೀತ, ಕಫ ನಮ್ಮ ಮೇಲೆ ದಾಳಿ ಮಾಡುತ್ತವೆ. ಇದರಿಂದ ಜನರು ಉಸಿರಾಟದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಇದನ್ನು ತಪ್ಪಿಸಲು ಏಲಕ್ಕಿಯನ್ನು ಹೆಚ್ಚಾಗಿ ಬಳಸಿ. ಏಲಕ್ಕಿಯನ್ನು ಈ ಮೂರು ರೀತಿಯಲ್ಲಿ ಬಳಸಿದರೆ ನಿಮಗೆ ಹೆಚ್ಚು ಪ್ರಯೋಜನ ದೊರೆಯುತ್ತದೆ.

1.ಏಲಕ್ಕಿ ಚಹಾ : ಏಲಕ್ಕಿ ಚಹಾ ಕುಡಿಯುವುದರಿಂದ ನಿಮ್ಮ ಕಫ ಕರಗುತ್ತದೆ. ಹಾಗಾಗಿ ನೀರಿಗೆ ಏಲಕ್ಕಿ, ದಾಲ್ಚಿನ್ನಿ, ಮತ್ತು ಚಹಾ ಎಲೆಗಳನ್ನು ಹಾಕಿ ಕುದಿಸಿ ಸೋಸಿ ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಿರಿ.

2. ಏಲಕ್ಕಿ ನೀರಿನ ಸ್ಟೀಮ್ : ಏಲಕ್ಕಿ , ತುಳಸಿ ಎಲೆ, ಪುದೀನಾ ಎಲೆ ಹಾಕಿ ಕುದಿಸಿ ನೀರಿನ ಹಬೆ ತೆಗೆದುಕೊಳ್ಳಿ. ಇದರಿಂದ ನಿಮ್ಮ ಎದೆಯಲ್ಲಿದ್ದ ಕಫ ಕರಗಿ ಎದೆ ಬಿಗಿತ ಕಡಿಮೆಯಾಗುತ್ತದೆ. ಇದನ್ನು ದಿನದಲ್ಲಿ 3 ಬಾರಿ ಮಾಡಿ.

3. ಏಲಕ್ಕಿ ಪುಡಿಗೆ ಜೇನುತುಪ್ಪ ಬೆರೆಸಿ ರಾತ್ರಿ ಮಲಗುವಾಗ ಸೇವಿಸಿ. ಇದರಿಂದ ಕೆಮ್ಮು, ಗಂಟಲು ನೋವು ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...