ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಜನರು ಬೇಗನೆ ಕಾಯಿಲೆಗೆ ಒಳಗಾಗುತ್ತಾರೆ, ಅದರಲ್ಲೂ ಚಿಕ್ಕ ಮಕ್ಕಳಿಗೆ ಯಾವಾಗಲೂ ಶೀತ, ಕಫ, ಕೆಮ್ಮು ಗಳಂತಹ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದಕಾರಣ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ.
*ವಾತಾವರಣ ಯಾವಾಗಲೂ ತಂಪಾಗಿರುವ ಕಾರಣ ಮಕ್ಕಳನ್ನು ಬೆಚ್ಚಗೆ ಇರಿಸಿ. ಅವರಿಗೆ ಕ್ಯಾಪ್, ಸಾಕ್ಸ್, ಉಣ್ಣೆಯ ಬಟ್ಟೆಗಳನ್ನು , ಸ್ವೆಟರ್ ಗಳನ್ನು ತೊಡಿಸಿ
*ಮಕ್ಕಳಿಗೆ ತಿನ್ನಲು ಯಾವುದೇ ಆಹಾರಗಳನ್ನು ನೀಡುವ ಮುನ್ನ ಅವರ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇಲ್ಲವಾದರೆ ಕೈಗಳಲ್ಲಿರುವ ಕೊಳೆ, ಧೂಳು, ವೈರಸ್ ಅವರ ಹೊಟ್ಟೆಗೆ ಸೇರಿ ಕಾಯಿಲೆ ಬೀಳಬಹುದು.
*ಚಳಿಗಾಲದಲ್ಲಿ ಮಕ್ಕಳಿಗೆ ಸಾಕಷ್ಟು ನೀರನ್ನು ಕುಡಿಸಿ ದೇಹವನ್ನು ಹೈಡ್ರೀಕರಿಸಿ. ಅದರಲ್ಲೂ ಬೆಚ್ಚಗಿರುವ ನೀರನ್ನು ಕುಡಿಸಿ.
*ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅವರಿಗೆ ಹಣ್ಣುಗಳನ್ನು, ತರಕಾರಿ, ಧಾನ್ಯಗಳು, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ನೀಡಿ.
*ಮಕ್ಕಳನ್ನು ಮನೆಯಿಂದ ಹೊರಗಡೆ ಹೆಚ್ಚು ಹೊತ್ತು ಆಟವಾಡಲು ಬಿಡಬೇಡಿ. ಮನೆಯ ಒಳಗೆ ಇರುವಂತೆ ಹೇಳಿ.