ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ ಸಿ, ಫೈಬರ್ ನಂತಹ ಪೋಷಕಾಂಶಗಳು ಇರುತ್ತದೆ. ಆದರೆ ಈ ಕಿತ್ತಳೆ ಹಣ್ಣನ್ನು ಚಳಿಗಾಲದಲ್ಲಿ ಅತಿಯಾಗಿ ಸೇವಿಸಿದರೆ ಈ ಸಮಸ್ಯೆಗಳು ಕಾಡುವುದು ಖಂಡಿತ.
1. ಕಿತ್ತಳೆ ಹಣ್ಣನ್ನು ಅತಿಯಾಗಿ ಸೇವಿಸಿದರೆ ಮೂಳೆ ಸಂಬಂಧಿತ ಸಮಸ್ಯೆ ಎದುರಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಆದರೆ ಈ ವಿಟಮಿನ್ ಸಿ ದೇಹದಲ್ಲಿ ಹೆಚ್ಚಾದರೆ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ಮೂಳೆ ಸಂಬಂಧಿಸಿದ ಕಾಯಿಲೆಗಳು ಶುರುವಾಗುತ್ತದೆ.
2. ಕಿತ್ತಳೆ ಹಣ್ಣನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಕಿತ್ತಳೆ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದರಲ್ಲಿರುವ ಸಕ್ಕರೆ ಅಂಶ ನೇರವಾಗಿ ರಕ್ತಕ್ಕೆ ಸೇರುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಸಮಸ್ಯೆ ಕಾಡಬಹುದು.
3. ಕಿತ್ತಳೆ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಅದನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆ ನೋವು, ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಕಾಡುತ್ತದೆ.
4.ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಇದರಲ್ಲಿರುವ ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಗಳು ಹಸಿವನ್ನು ಹೆಚ್ಚಿಸಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ನಷ್ಟ ಮಾಡಲು ಬಯಸುವವರಿಗೆ ಇದರಿಂದ ಸಮಸ್ಯೆಯಾಗುತ್ತದೆ.