ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳಾದವರು, ಹೆಚ್ಚು ಮಾತ್ರೆಗಳನ್ನು ಸೇವಿಸುವವರು, ಖಾರ ಮಸಾಲೆ ಬಳಸಿ ಊಟ ಮಾಡುವವರು ಹೆಚ್ಚಾಗಿ ಅಥವಾ ಪ್ರತಿದಿನ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಎದುರಿಸುತ್ತಾರೆ. ಜೀರಿಗೆಯಲ್ಲಿ ಈ ಸಮಸ್ಯೆಗೆ ಮದ್ದಿದೆ.
ಹೊಟ್ಟೆ ಉಬ್ಬರಿಸಿಕೊಂಡಾಗ, ಹಸಿವಿಲ್ಲದಂತಾದಾಗ ಹಾಗೂ ಹುಳಿತೇಗು ಬರುತ್ತಿದ್ದಾಗ ಒಂದು ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ. ಸಣ್ಣ ತುಂಡು ದಾಲ್ಚಿನಿ, ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ನಿಂಬೆರಸ ಹಿಂಡಿ ಕುಡಿಯಿರಿ.
ಅಡುಗೆ ಸೋಡಾಗೆ ಚಿಟಿಕೆ ಉಪ್ಪು ಮತ್ತು ನಿಂಬೆರಸ ಬೆರೆಸಿ ಕುಡಿದರೂ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಹಸಿಶುಂಠಿ ಸೇವನೆಯಿಂದಲೂ ಗ್ಯಾಸ್ಟ್ರಿಕ್ ಸಮಸ್ಯೆ ದೂರಮಾಡಬಹುದು. ಇದನ್ನು ಜಜ್ಜಿ ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ. ಚಿಟಕೆ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಕುಡಿಯಿರಿ.
ಕೊತ್ತಂಬರಿಯನ್ನು ಹಿಂದಿನ ದಿನವೇ ನೆನೆಸಿಟ್ಟು ಮರುದಿನ ಬೆಳಗೆದ್ದು ಅದರ ನೀರನ್ನು ಕುಡಿಯುವುದು ಬಹಳ ಒಳ್ಳೆಯದು. ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ತಣ್ಣಗಿನ ಒಂದು ಲೋಟ ಹಾಲನ್ನು ಕುಡಿಯುವುದರಿಂದಲೂ ಗ್ಯಾಸ್ಟ್ರಿಕ್ ಅನ್ನು ನಿಯಂತ್ರಿಸಬಹುದು.