ಕೋವಿಡ್ ಸಂಕಷ್ಟ ಶುರುವಾದಾಗಿನಿಂದ ಜನರಿಗೆ ಆಮ್ಲಜನಕ ಮಟ್ಟವನ್ನ ಸರಿದೂಗಿಸಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿದೆ.
ಕೋವಿಡ್ ರೋಗಿಗಳಲ್ಲಿ ಆಮ್ಲಜನಕ ಮಟ್ಟದಲ್ಲಿ ಇಳಿಕೆ ಕಂಡುಬಂದಲ್ಲಿ ಭಾರೀ ಸಮಸ್ಯೆ ಉಂಟಾಗುತ್ತೆ. ಹೀಗಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ.
ಕೊರೊನಾದ ಅಪಾಯದಿಂದ ದೂರ ಇರಬೇಕು ಅಂದರೆ ದೇಹದಲ್ಲಿ ಆಮ್ಲಜನಕ ಮಟ್ಟ ಸರಿಯಾದ ಪ್ರಮಾಣದಲ್ಲಿ ಇರಬೇಕು. ಇದಕ್ಕಾಗಿ ನೀವು ಈ ಕೆಳಗಿರುವ ಆಹಾರಗಳನ್ನ ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳೋದು ಒಳಿತು.
1. ಕಡಲೆ ಕಾಳು
ಕಂದು ಬಣ್ಣದ ಕಡಲೆ ಕಾಳುಗಳಲ್ಲಿ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿ ಇರುತ್ತೆ. ಹೀಗಾಗಿ ಇದರ ಸೇವನೆ ಆರೋಗ್ಯದ ದೃಷ್ಟಿಯಿಂದ ತುಂಬಾನೆ ಒಳ್ಳೆಯದು. ಅಲ್ಲದೇ ಇದು ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಹೆಚ್ಚಿಸಲು ಸಹಾಯ ಮಾಡಲಿದೆ.
2. ಕಿತ್ತಳೆ
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಗಾಧ ಪ್ರಮಾಣದಲ್ಲಿ ಇದೆ. ಕಿತ್ತಳೆ ಹಣ್ಣುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಸಹಕಾರಿ. ಅಗಾಧ ಪ್ರಮಾಣದ ಪೋಷಕಾಂಶಗಳನ್ನ ಹೊಂದಿರುವ ಕಿತ್ತಳೆ ಸಹ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಹೆಚ್ಚಿಸಲಿದೆ.
3. ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವೇ ಇರಲಿದೆ. ಇದು ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಎ ಅಂಶ ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸರಿದೂಗಿಸಲಿದೆ.
4. ಸ್ಟ್ರಾಬೆರ್ರಿ
ಸ್ಟ್ರಾಬೆರ್ರಿಯಲ್ಲಿರುವ ವಿಟಮಿನ್ ಸಿ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಸಹಕಾರಿ. ಅಲ್ಲದೇ ಈ ಹಣ್ಣಿನ ಸೇವನೆಯಿಂದ ಆಮ್ಲಜನಕ ಮಟ್ಟ ಕೂಡ ಸುಧಾರಿಸಲಿದೆ. ಕೊರೊನಾ ರೋಗಿಗಳು ಸಹ ತಮ್ಮ ಆಹಾರ ಕ್ರಮದಲ್ಲಿ ಸ್ಟ್ರಾಬೆರ್ರಿ ಹಣ್ಣುಗಳನ್ನ ಸೇವಿಸಬಹುದು.
5. ಸೇಬು ಹಣ್ಣು
ಸೇಬು ಹಣ್ಣಿನಲ್ಲಿ ರೋಗಗಳ ವಿರುದ್ಧ ಹೋರಾಡಬಲ್ಲ ಸಾಕಷ್ಟು ಆಂಟಿಆಕ್ಸಿಡಂಟ್ಗಳಿವೆ. ಸೇಬು ಹಣ್ಣಿನಲ್ಲಿರುವ ಕೆಲ ಅಂಶಗಳು ದೇಹದಲ್ಲಿ ಹೊಸ ಕೋಶಗಳನ್ನ ಹುಟ್ಟುಹಾಕಲು ಸಹಕಾರಿಯಾಗಿವೆ. ಅಲ್ಲದೇ ಸೇಬು ಹಣ್ಣಿನಿಂದ ಆಕ್ಸಿಜನ್ ಲೆವೆಲ್ ಸಹ ಹೆಚ್ಚಲಿದೆ.
6. ಕಿವಿ
ಕಿವಿ ಹಣ್ಣಿನಲ್ಲಿರುವ ಆಕ್ಟಿನಿಡಿನ್ ಎಂಬ ಎಂಜೈಮ್ ದೇಹದಲ್ಲಿ ಪ್ರೋಟೀನ್ಗಳನ್ನ ಜೀರ್ಣಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ ಅಂಶ ಕೂಡ ಇರೋದ್ರಿಂದ ಕೊರೊನಾವನ್ನ ಹೋಗಲಾಡಿಸಲು ಉಪಯುಕ್ತವಾಗಿದೆ. ಹೀಗಾಗಿ ಕಿವಿ ಹಣ್ಣನ್ನ ಕೊರೊನಾ ರೋಗಿಗಳಿಗೆ ನೀಡುತ್ತಾರೆ. ಈ ಹಣ್ಣಿನ ಸೇವನೆಯಿಂದ ಆಕ್ಸಿಜನ್ ಮಟ್ಟ ಸಮ ಪ್ರಮಾಣದಲ್ಲಿ ಇರಲಿದೆ.
7. ಮಾವಿನ ಹಣ್ಣು
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಅಂಶ ಅಗಾಧ ಪ್ರಮಾಣದಲ್ಲಿದ್ದು, ದೇಹವನ್ನ ಅನೇಕ ಮಾರಕ ಕಾಯಿಲೆಗಳಿಂದ ದೂರವಿಡಲಿದೆ. ಮಾವಿನ ಹಣ್ಣಿನ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಅಲ್ಲದೇ ಆಮ್ಲಜನಕ ಮಟ್ಟವೂ ಸುಧಾರಿಸಲಿದೆ.
8. ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡಂಟ್ ಪ್ರಮಾಣ ಅಧಿಕವಾಗಿದೆ. ಅಲ್ಲದೇ ವಿಟಮಿನ್ ಸಿ ಕೂಡ ಅಗಾಧ ಪ್ರಮಾಣದಲ್ಲಿರೋದ್ರಿಂದ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಇದು ಆಮ್ಲಜನಕ ಮಟ್ಟವನ್ನ ಸರಿದೂಗಿಸೋದ್ರಿಂದ ನಿತ್ಯ ಸೇವನೆ ಮಾಡಬಹುದಾಗಿದೆ.
9. ಹುರಿದ ಜೀರಿಗೆ
ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸುಧಾರಿಸುವಲ್ಲಿ ಹುರಿದ ಜೀರಿಗೆ ಮಹತ್ವದ ಪಾತ್ರವನ್ನ ವಹಿಸುತ್ತದೆ. ಜೀರಿಗೆಯಲ್ಲಿ ಕಬ್ಬಿಣಾಂಶ ಅಗಾಧ ಪ್ರಮಾಣದಲ್ಲಿದೆ. ಅಲ್ಲದೇ ಇದು ಆಮ್ಲಜನಕ ಮಟ್ಟ ಹೆಚ್ಚಿಸುವಲ್ಲಿಯೂ ಸಹಕಾರಿ. ಆದರೆ ಎಂದಿಗೂ ಜೀರಿಗೆ ಹಾಗೂ ಉಪ್ಪನ್ನ ಒಟ್ಟಿಗೆ ಸೇವನೆ ಮಾಡಿದಿರಿ.
10. ವಿಟಮಿನ್ ಡಿ
ದೇಹದಲ್ಲಿ ಆಮ್ಲಜನಕ ಮಟ್ಟವನ್ನ ಸರಿದೂಗಿಸಿಕೊಳ್ಳಬೇಕು ಅಂದರೆ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ವಿಟಮಿನ್ ಡಿ ಅಗಾಧ ಪ್ರಮಾಣದಲ್ಲಿರುವ ಆಹಾರವನ್ನ ಸೇವಿಸಬೇಕು. ಇದರಿಂದ ಕೊರೊನಾದಿಂದ ಗುಣಮುಖರಾಗೋದು ಸುಲಭವಾಗೋದ್ರ ಜೊತೆಗೆ ದೇಹದಲ್ಲಿ ಶಕ್ತಿ ಕೂಡ ಹೆಚ್ಚಲಿದೆ.