ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದರಿಂದ ತುರಿಕೆಯೂ ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗಾಗಿ ಇದೇ ಸಮಯದಲ್ಲಿ ಗಜಕರ್ಣದಂಥ ಸಮಸ್ಯೆಗಳು ಹೆಚ್ಚಾಗಿ ಅಪಾರ ಕಿರಿಕಿರಿಯನ್ನು ತಂದೊಡ್ಡುತ್ತದೆ. ಇದನ್ನು ವಾಸಿ ಮಾಡುವ ಬಗೆಯನ್ನು ತಿಳಿಯೋಣ.
ಹೆಚ್ಚಾಗಿ ಗಾಳಿಯಾಡದ ಜಾಗಗಳಲ್ಲಿ ಕಾಣಿಸಿಕೊಂಡು ತೀವ್ರ ತೆರನಾದ ತುರಿಕೆ ಹಾಗೂ ನೋವನ್ನುಂಟು ಮಾಡುವ ಇದರ ನಿವಾರಣೆಗೆ ಹಸಿ ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ನಾಲ್ಕಾರು ಬಾರಿ ಹೀಗೆ ಮಾಡಿದರೆ ಸಾಕು ನಿಮ್ಮ ಸಮಸ್ಯೆ ದೂರವಾಗುತ್ತದೆ.
ಬೇವಿನ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಪೇಸ್ಟ್ ತಯಾರಿಸಿ. ಅದಕ್ಕೆ ಚಿಟಿಕೆ ಅರಶಿನ ಮತ್ತು ತುಳಸಿ ಪೇಸ್ಟನ್ನು ಸೇರಿಸಿ ಹಚ್ಚಿ ಒಂದು ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಪುಡಿ ಮಾಡಿ ಸೇರಿಸಿ. ಅರ್ಧ ಗಂಟೆ ಹಚ್ಚಿಡಿ. ಬಳಿಕ ತೊಳೆಯಿರಿ. ಇದನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿದರೆ ಗಜಕರ್ಣ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ