ದೇಹದ ಪ್ರತಿಯೊಂದು ಭಾಗದಲ್ಲೂ ತುರಿಕೆ ಕಾಣಿಸಿಕೊಳ್ಳುತ್ತದೆ. ತುರಿಕೆ ಯಾವ ಭಾಗದಲ್ಲಿ ಕಾಣಿಸಿಕೊಂಡ್ರೂ ಸಮಸ್ಯೆಯೆ. ಆದ್ರೆ ಖಾಸಗಿ ಅಂಗದಲ್ಲಿ ಕಾಣಿಸಿಕೊಂಡಲ್ಲಿ ಮುಜುಗರಕ್ಕೀಡಾಗಬೇಕಾಗುತ್ತದೆ. ಸಾರ್ವಜನಿಕ ಪ್ರದೇಶದಲ್ಲಿದ್ದಾಗ ಖಾಸಗಿ ಅಂಗದಲ್ಲಿ ತುರಿಕೆ ಕಾಣಿಸಿಕೊಂಡರೆ ಆಗುವ ನಾಚಿಕೆ ಅಷ್ಟಿಷ್ಟಲ್ಲ. ಈ ತುರಿಕೆಗೆ ಮನೆಯಲ್ಲಿಯೇ ಮದ್ದಿದೆ.
ತೆಂಗಿನ ಎಣ್ಣೆಗೆ ಬ್ಯಾಕ್ಟೀರಿಯಾ ಹೊಡೆದೋಡಿಸುವ ಶಕ್ತಿಯಿದೆ. ಇದು ತುರಿಕೆ ಸಮಸ್ಯೆಗೆ ಬೇಗ ಪರಿಹಾರ ನೀಡುತ್ತದೆ. ಖಾಸಗಿ ಅಂಗದಲ್ಲಿ ತುರಿಕೆ ಕಾಣಿಸಿಕೊಂಡಾಗ ತೆಂಗಿನ ಎಣ್ಣೆಯನ್ನು ಹಚ್ಚಬಹುದು.
ಕಹಿ ಬೇವಿನಲ್ಲಿ ಔಷಧಿ ಗುಣವಿದೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳನ್ನು ತಡೆಯುತ್ತದೆ. ಸ್ನಾನದ ನೀರಿನಲ್ಲಿ ಕೆಲವು ಬೇವಿನ ಎಲೆಗಳನ್ನು ಬೆರೆಸಿ ಸ್ನಾನ ಮಾಡಬೇಕು. ಕೆಲವು ಬೇವಿನ ಎಲೆಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಬಹುದು. ಇದರ ನಂತರ ಅದು ತಣ್ಣಗಾದ ಮೇಲೆ ಅದನ್ನು ಖಾಸಗಿ ಅಂಗಕ್ಕೆ ಹಾಕಿ ಸ್ವಚ್ಛಗೊಳಿಸಬೇಕು.
ಬೆಳ್ಳುಳ್ಳಿ ಎಣ್ಣೆಯಲ್ಲಿ ಕೂಡ ಸೋಂಕು ತಡೆಯುವ ಶಕ್ತಿಯಿರುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಜೈವಿಕ ವಿರೋಧಿ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿ ಎಣ್ಣೆಗೆ ಕೆಲವು ಹನಿ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ. ಇದನ್ನು ಖಾಸಗಿ ಅಂಗಕ್ಕೆ ಹಚ್ಚಿ ಒಣಗಿದ ನಂತ್ರ ಸ್ವಚ್ಛಗೊಳಿಸಿಕೊಳ್ಳಿ. ತುರಿಕೆ ಹೆಚ್ಚಾದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.