ಕ್ಷಯ ಒಂದು ಸಾಂಕ್ರಾಮಿಕ ಬ್ಯಾಕ್ಟೀರಿಯಾ ಸೋಂಕಾಗಿದೆ, ಇದು ಪ್ರಾಥಮಿಕವಾಗಿ ನಿಮ್ಮ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಕ್ರಮೇಣ ದೇಹದ ವಿವಿಧ ಭಾಗಗಳಿಗೆ ಹರಡುತ್ತದೆ. ಕೆಮ್ಮಿನಲ್ಲಿ ರಕ್ತ, ದಣಿವು, ಆಯಾಸ, ಎದೆನೋವು, ತೂಕ ನಷ್ಟ, ರಾತ್ರಿ ಬೆವರು, ಜ್ವರ ಮುಂತಾದವು ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣಗಳಾಗಿವೆ. ಈ ರೋಗದಿಂದ ಬಹಳ ಬೇಗನೆ ಗುಣಮುಖರಾಗಲು ಔಷಧಿಯ ಜೊತೆಗೆ ಈ ಮನೆಮದ್ದುಗಳನ್ನು ಸೇವಿಸಿ.
*ಬೆಳ್ಳುಳ್ಳಿ ಕ್ಷಯರೋಗಕ್ಕೆ ಉತ್ತಮವಾದ ಮನೆಮದ್ದಾಗಿದೆ. ಇದು ಕ್ಷಯ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಹಾಗೇ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಪುದೀನಾ : ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಕ್ಷಯರೋಗದಿಂದ ಹಾನಿಗೊಳಗಾದ ಅಂಗಾಂಶಗಳನ್ನು ಗುಣಪಡಿಸುತ್ತದೆ. 2 ಚಮಚ ಪುದೀನ ರಸಕ್ಕೆ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಸೇವಿಸಿ.
*ಕರಿ ಮೆಣಸು ಶ್ವಾಸಕೋಶವನ್ನು ಶುದ್ಧೀಕರಿಸಿ ಲೋಳೆಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಕ್ಷಯರೋಗದಿಂದ ಉಂಟಾಗುವ ಎದೆನೋವನ್ನು ನಿವಾರಿಸುತ್ತದೆ.
*ಅನಾನಸ್ : ಈ ಹಣ್ಣಿನ ರಸವು ಲೋಳೆ ರಚನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಅನಾನಸ್ ರಸವನ್ನು ಕುಡಿಯಿರಿ.
* ನೆಲ್ಲಿಕಾಯಿ : ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ಕ್ಷಯರೋಗದ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.