ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಳಿತು ದೇಹ ತೂಕ ಹೇಗೆ ಇಳಿಸಿಕೊಳ್ಳುವುದು ಎಂಬುದರ ಬಗ್ಗೆ ಚಿಂತಿಸುತ್ತಿದ್ದೀರಾ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಇಳಿಸಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ಮ್ಯಾಗ್ನಿಸಿಯಂ ಉತ್ಪನ್ನಗಳನ್ನು ಹೆಚ್ಚು ಸೇವಿಸಿ. ಗೋಧಿ ಉತ್ಪನ್ನಗಳು, ಗೋಡಂಬಿ, ನೆಲಕಡಲೆ ಇತ್ಯಾದಿಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಮ್ಯಾಗ್ನೀಸಿಯಂ ಹೆಚ್ಚುತ್ತದೆ, ಪರಿಣಾಮ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’
ವಿಟಮಿನ್ ಸಿ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ಸಹಜವಾಗಿಯೇ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಅಂಥ ವಸ್ತುಗಳೆಂದರೆ ಕಿವಿ, ಪಪ್ಪಾಯ, ಸ್ಟ್ರಾಬೆರಿ, ಅನಾನಾಸು, ದ್ರಾಕ್ಷಿ, ಕಿತ್ತಳೆ, ಮೂಸಂಬಿ ಇತ್ಯಾದಿಗಳನ್ನು ಸೇವಿಸಿ
ಬೆಳಗಿನ ಉಪಾಹಾರಕ್ಕೆ ಇಲ್ಲವೇ ರಾತ್ರಿಯೂಟದ ಬದಲು ಓಟ್ಸ್ ಮೀಲ್ ಸೇವಿಸಿ. ಗ್ರೀನ್ ಟೀ ಕುಡಿಯಿರಿ. ಡಯಟ್ ಪ್ಲಾನ್ ಅನುಸರಿಸುವ ಮುನ್ನ ಥೈರಾಯ್ಡ್ ಪರೀಕ್ಷೆ ಮಾಡಿಕೊಳ್ಳಿ. ಇತರ ಎಣ್ಣೆಗಳ ಬದಲು ತೆಂಗಿನೆಣ್ಣೆ ಬಳಸಿ. ಜಂಕ್ ಫುಡ್ ಸೇವನೆಗೆ ಫುಲ್ ಸ್ಟಾಪ್ ಹಾಕಿ ಹಾಗೂ ಮದ್ಯಪಾನದಿಂದ ಶಾಶ್ವತವಾಗಿ ದೂರವಿರಿ.