ಕೊರೊನಾ ವೈರಸ್ ನಂತಹ ಸಾಂಕ್ರಾಮಿಕ ರೋಗದ ಭಯದಿಂದಾಗಿ ಪ್ರತಿಯೊಬ್ಬರು ಆರೋಗ್ಯವಾಗಿರಲು ಮನೆಯಲ್ಲಿಯೇ ಕಷಾಯಗಳನ್ನು ತಯಾರಿಸಿ ಕುಡಿಯುತ್ತಾರೆ. ಕಷಾಯ ಕುಡಿಯುವುದರಿಂದ ಅನೇಕ ಪ್ರಯೋಜನಗಳಿದ್ದರೂ ಕೂಡ ಅತಿಯಾದ ಸೇವನೆಯಿಂದ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅದು ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.
1. ಕಷಾಯವನ್ನು ಹೆಚ್ಚು ಕುದಿಸಬೇಡಿ. ಹೆಚ್ಚು ಕುದಿಸುವುದರಿಂದ ಕಹಿ ಉಂಟಾಗುತ್ತದೆ. ಮತ್ತು ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲ ಉಂಟಾಗುತ್ತದೆ.
2. ದಿನಕ್ಕೆ ಮೂರು ಬಾರಿ ಕಷಾಯ ಕುಡಿಯಬೇಡಿ. ಬದಲಾಗಿ ಒಂದು ದಿನದಲ್ಲಿ ½ ಕಪ್ ಕಷಾಯ ಸೇವಿಸಿದರೆ ಉತ್ತಮ.
3. ಕಷಾಯಕ್ಕೆ ಹೆಚ್ಚಾಗಿ ಉಷ್ಣ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ಬಳಸುತ್ತಾರೆ. ಅದರ ಜೊತೆಗೆ ತಂಪಾಗಿರುವ ಪದಾರ್ಥಗಳನ್ನು ಸೇರಿಸಿ ಕುದಿಸಿ. ಇದರಿಂದ ದೇಹದಲ್ಲಿ ಶಾಖ ಉತ್ಪಾದನೆ ಮತ್ತು ಹೊಟ್ಟೆಯುರಿ ಕಡಿಮೆಯಾಗುತ್ತದೆ.
4. ಕಷಾಯ ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆದಕಾರಣ ಸರಿಯಾಗಿ ನೀರನ್ನು ಕುಡಿಯಬೇಕು. ದೇಹವನ್ನು ತಂಪಾಗಿಸುವ ಪಾನೀಯವನ್ನು ಸೇವಿಸಿ.