ಕೊರೋನಾ ಲಸಿಕೆ ಪಡೆಯುವುದು ಕಡ್ಡಾಯ ಮತ್ತು ಅನಿವಾರ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಇದರ ಇಂಜೆಕ್ಷನ್ ತೆಗೆದುಕೊಳ್ಳುವ ಮುನ್ನ ಹಾಗೂ ತೆಗೆದುಕೊಂಡ ನಂತರ ಈ ಕೆಲವು ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.
ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಮತ್ತೆ ಕೆಲವು ದಿನಗಳ ಬಳಿಕ ಅದು ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ನೀವು ಲಸಿಕೆ ಹಾಕಿಸಿಕೊಳ್ಳುವ ಮುನ್ನ ಸಾಕಷ್ಟು ನೀರು ಕುಡಿಯಿರಿ. ಹಾಗೂ ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ತಿನ್ನಿ.
ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಲು ಸೇವಿಸಿ ಈ ಜ್ಯೂಸ್
ಮದ್ಯಪಾನಕ್ಕೂ ಕೆಲವು ದಿನಗಳ ತನಕ ಗುಡ್ ಬೈ ಹೇಳಿ. ಇದರಿಂದಲೂ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ದೇಹದಲ್ಲಿ ನೀರಿನಂಶ ಕಡಿಮೆಯಾದಂತೆ ಲಸಿಕೆಯ ಅಡ್ಡ ಪರಿಣಾಮಗಳು ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ.
ಸಕ್ಕರೆ ಬೆರೆಸಿದ ಪದಾರ್ಥಗಳಿಂದ ಕೆಲವು ದಿನಗಳ ತನಕ ದೂರವಿರಿ. ಬೇಕರಿ ಸ್ವೀಟ್ ಗಳು, ರೆಡಿಮೇಡ್ ಜ್ಯೂಸ್, ಸಂಸ್ಕರಿಸಿದ ಆಹಾರಗಳಿಂದ ದೂರವಿದ್ದಾಗ ಮಾತ್ರ ನಿಮ್ಮ ಆರೋಗ್ಯ ಸುರಕ್ಷಿತವಾಗಿರುತ್ತದೆ. ಇಲ್ಲವಾದರೆ ನಿದ್ರಾಹೀನತೆ, ಒತ್ತಡ ಆತಂಕದಂಥ ಲಕ್ಷಣಗಳು ಕಂಡು ಬಂದಾವು.