ಇದು ಕೊರೊನಾ ಕಾಲ. ಸಣ್ಣ ನೆಗಡಿಯಾದ್ರೂ ಭಯ ಸಾಮಾನ್ಯ. ಸರಿಯಾಗಿ ಚಿಕಿತ್ಸೆ ಸಿಗ್ತಿಲ್ಲ ಎಂಬ ಸುದ್ದಿಗಳು ಜ್ವರ ಬಂದವರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ರೋಗಗಳಿಂದ ದೂರವಿರಲು ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಬೇಕು.
ಮಳೆಗಾಲದಲ್ಲಿ ತಣ್ಣನೆಯ ಮತ್ತು ಹಳೆಯ ಆಹಾರವನ್ನು ಸೇವಿಸಬೇಡಿ. ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಬೇಕು.
ಮಳೆಗಾಲದಲ್ಲಿ ನೀರಿನಲ್ಲಿ ನೆನೆಯಬೇಡಿ. ಹೊರಗೆ ಹೋಗಬೇಕಾದಾಗಲೆಲ್ಲಾ ನಿಮ್ಮೊಂದಿಗೆ ಒಂದು ಛತ್ರಿ ಅಥವಾ ರೇನ್‌ಕೋಟ್ ಇರಿಸಿ.
ಹೆಚ್ಚು ಮಳೆಯಾಗುವ ಹಾಗೂ ಕೊಳಕು ನೀರಿರುವ ಪ್ರದೇಶಗಳಿಗೆ ಭೇಟಿ ನೀಡಬೇಡಿ.
ಈ ಋತುವಿನಲ್ಲಿ ಸಾಕಷ್ಟು ವಿಟಮಿನ್-ಸಿ ಸೇವನೆ ಮಾಡಿ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡಿ.
ನಿಮ್ಮ ಕೈ, ಕಾಲು ಮತ್ತು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕೊಳಕಿರದಂತೆ ನೋಡಿಕೊಳ್ಳಿ.
ಒದ್ದೆಯಾಗಿದ್ದರೆ ದೇಹವನ್ನು ಸರಿಯಾಗಿ ಒರೆಸುವ ಬದಲು, ಮತ್ತೊಮ್ಮೆ ಸ್ನಾನ ಮಾಡಿ. ಇದು ಆರೋಗ್ಯಕ್ಕೆ ಒಳ್ಳೆಯದು.