ಕೊರೊನಾವೈರಸ್ ಎಲ್ಲರ ಆಹಾರ ಪದ್ಧತಿಯನ್ನು ಬದಲಿಸಿದೆ. ಮಾಂಸಾಹಾರದ ಬಗ್ಗೆ ಮೂಡಿದ ಪುಕಾರುಗಳು ಕೆಲ ದಿನಗಳವರೆಗೆ ಆ ಉದ್ಯಮವನ್ನೇ ಸಪ್ಪೆಯಾಗಿಸಿತು. ಪರಿಣಾಮ ಸಸ್ಯಾಹಾರಕ್ಕೆ ಬೇಡಿಕೆ ಹೆಚ್ಚಿತು.
ಇಂದು ಹೊರಗೆ ಆಹಾರ ಸೇವಿಸುವ ಮುನ್ನ ಎರಡು ಬಾರಿ ಯೋಚಿಸುವ ಪರಿಸ್ಥಿತಿ ಬಂದಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕೋವಿಡ್ 19. ಬೀದಿಬದಿಯ ವ್ಯಾಪಾರಿಗಳಿಗೆ ಬಹುದೊಡ್ಡ ಏಟು ನೀಡಿದ ಇದು ಬಹುತೇಕ ಸಣ್ಣ ಹೋಟೆಲ್ ಗಳನ್ನೂ ಮುಚ್ಚುವಂತೆ ಮಾಡಿತು. ಸ್ವಿಗ್ಗೀ ಅಥವಾ ಝೊಮ್ಯಾಟೊದಂಥ ಆನ್ ಲೈನ್ ಬುಕ್ಕಿಂಗ್ ಫುಡ್ ಡೆಲಿವರಿ ಆಪ್ ಗಳಲ್ಲಿ ಅದೆಷ್ಟೊ ಜನ ಉದ್ಯೋಗ ಕಳೆದುಕೊಂಡರು.
ಚೆಫ್ ಡ್ರೈವನ್ ಡೆಲಿವರಿ ರೆಸ್ಟೋರೆಂಟ್ಗಳು ಇಂದು ಪ್ರಸಿದ್ಧಿ ಪಡೆಯುತ್ತಿವೆ. ನೀವು ನೈರ್ಮಲ್ಯ ಮತ್ತು ಸುರಕ್ಷತೆಗೆ ಅದ್ಯತೆ ನೀಡುವ ರೆಸ್ಟೋರೆಂಟ್ ಗಳನ್ನೇ ಆಯ್ದುಕೊಳ್ಳಿ. ಪ್ಯಾಕೇಜ್ ಮೂಲಕ ಮನೆಗೆ ತರಿಸಿಕೊಳ್ಳುವ ವಿಧಾನಕ್ಕೆ ಕೊಂಚ ದಿನಗಳ ತನಕ ಬಾಯ್ ಹೇಳಿ.
ಸಸ್ಯಾಹಾರಿ ಊಟಗಳು ಹೆಚ್ಚು ಕಾರ್ಬೋಹೈಡ್ರೇಟ್ಸ್ ಗಳನ್ನು ನೀಡುತ್ತದೆ. ಹಾಗಾಗಿ ಹೊಟ್ಟೆ ತುಂಬಾ ತಿನ್ನುವ ಬದಲು ಎಷ್ಟು ಬೇಕೋ ಅಷ್ಟೇ ತಿಂದು ಆರೋಗ್ಯದ ಕಾಳಜಿಯತ್ತಲೂ ಗಮನ ಕೊಡಿ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲೇ ಬೇಯಿಸಿ ತಿನ್ನುವ ಆಯ್ಕೆಗಳಿದ್ದರೆ ಅದನ್ನೇ ಅನುಸರಿಸಿ. ಮಾಡಲು ತಿಳಿದಿಲ್ಲ ಎಂಬ ಚಿಂತೆ ಬಿಟ್ಟು ಯೂಟ್ಯೂಬ್ ಮೊದಲಾದ ಜಾಲತಾಣಗಳಲ್ಲಿ ಸಿಗುವ ಟಿಪ್ಸ್ ಗಳನ್ನ ಫಾಲೋ ಮಾಡಿ.