ಮಾರುಕಟ್ಟೆಯಲ್ಲಿ ಸದ್ಯ ಹೇರಳವಾಗಿ ಸಿಗುತ್ತಿರುವ ಕಿತ್ತಳೆ ಹಣ್ಣನ್ನು ಪ್ರತಿಯೊಬ್ಬರೂ ಸೇವಿಸಲೇ ಬೇಕು, ಏಕೆ ಗೊತ್ತಾ…?
ಕಿತ್ತಳೆ ಹಣ್ಣು ಒಮ್ಮೆಲೆ ತಿನ್ನುವಾಗ ತುಸು ಹುಳಿ ಎನಿಸಿದರೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಕಾಡದಂತೆ ನೋಡಿಕೊಳ್ಳುತ್ತವೆ. ಇದರಲ್ಲಿ ಕೊಲೆಸ್ಟ್ರಾಲ್ ಅನ್ನು ಕರಗಿಸುವ ಗುಣವೂ ಅಡಗಿದೆ.
ಕಿತ್ತಳೆಯಲ್ಲಿರುವ ನಾರಿನಂಶ ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಸರ್ ನಿವಾರಿಸಿ, ತ್ವಚೆ ಹಾಗೂ ಕೂದಲನ್ನು ಸಂರಕ್ಷಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಎ ಮತ್ತು ಪೊಟ್ಯಾಶಿಯಂ ಗುಣವಿದ್ದು ದೃಷ್ಟಿಯ ಚುರುಕುತನವನ್ನು ಹೆಚ್ಚಿಸುತ್ತದೆ.
ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆಯಾಗುತ್ತದೆ. ಹೇರಳವಾದ ಫೋಲಿಕ್ ಅಸಿಡ್ ಅಂಶ ದೇಹಕ್ಕೆ ಲಭ್ಯವಾಗುತ್ತದೆ. ಅನಾವಶ್ಯಕ ಕೊಬ್ಬು ಕಡಿಮೆಯಾಗುತ್ತದೆ. ಉರಿಯೂತದಂಥ ಸಮಸ್ಯೆಗಳು ಕಡಿಮೆಯಾಗುತ್ತವೆ.
ಕಿತ್ತಳೆ ಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಹಲವು ವಿಧದ ಕ್ಯಾನ್ಸರ್ ರೋಗಗಳು ಬರದಂತೆ ತಡೆಯಬಹುದು ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಹಾಗಾಗಿ ದೇಹಕ್ಕೆ ಹಲವು ವಿಧದ ವಿಟಮಿನ್ ಮತ್ತು ಪೋಷಕಾಂಶಗಳನ್ನು ಒದಗಿಸುವ ಕಿತ್ತಳೆಯನ್ನು ಮರೆಯದೆ ಸೇವಿಸಿ.